ADVERTISEMENT

ಪ್ರತ್ಯೇಕ ಕಂದಾಯ ವಸೂಲಿಗೆ ಕಾಂಗ್ರೆಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:21 IST
Last Updated 19 ಡಿಸೆಂಬರ್ 2012, 9:21 IST

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆಮನೆ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಪ್ರತ್ಯೇಕ ಕಂದಾಯ ವಸೂಲಿಗಾಗಿ ಮಹಾನಗರ ಪಾಲಿಕೆ ನೀಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು.

ಯಾವುದೇ ಚರ್ಚೆ ನಡೆಸದೇ ಪಾಲಿಕೆ ಆಡಳಿತ ನಡೆಸುತ್ತಿರುವ ಬಿಜೆಪಿ, ಮನೆ ಕಂದಾಯದ ಜತೆಗೇ ಕಸ ವಿಲೇವಾರಿಗಾಗಿ ಪ್ರತ್ಯೇಕ ಕಂದಾಯ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.

ಪ್ರತಿ ಮನೆಯಿಂದ ವರ್ಷಕ್ಕೆ ಗರಿಷ್ಠ  ್ಙ 600, ಹೋಟೆಲ್, ಕಲ್ಯಾಣಮಂಟಪ, ನರ್ಸಿಂಗ್ ಹೋಂಗಳಿಗೆ ವರ್ಷಕ್ಕೆ ್ಙ 1,800ರಿಂದ 7,200ರವರೆಗೆ, ವಾಣಿಜ್ಯ ಕಟ್ಟಡಗಳಿಗೆ ್ಙ 1,200ರಿಂದ 3,600ರವರೆಗೆ ಕಂದಾಯ ಕಟ್ಟಲು ಆದೇಶ ನೀಡಲಾಗಿದೆ. ಈ ಆದೇಶದ ವಿರುದ್ಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದವರು ವಿರೋಧ ಪಡಿಸಿದ್ದರು. ಈ ಆದೇಶ ತಡೆಹಿಡಿಯುವುದಾಗಿ ಭರವಸೆ ನೀಡಿ ತಿಂಗಳು ಕಳೆದಿದೆ. ಆದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ, ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಕಂದಾಯ ಕಟ್ಟಲು ಆದೇಶಿಸಿದೆ. ಕೂಡಲೇ ಪಾಲಿಕೆ ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಮುಖಂಡರಾದ ಡಿ. ಬಸವರಾಜ, ಬಿ.ಎಚ್. ವೀರಭದ್ರಪ್ಪ, ದಿನೇಶ್ ಕೆ. ಶೆಟ್ಟಿ, ಲಲಿತಮ್ಮ ತಿಪ್ಪೇಸ್ವಾಮಿ, ಎ. ನಾಗರಾಜ, ರೇಖಾ ನಾಗರಾಜ, ಮೀನಾಕ್ಷಮ್ಮ, ಮಹಾದೇವಮ್ಮ, ಪದ್ಮಾ ವೆಂಕಟೇಶ್, ಬಿ.ಎನ್. ರಾಜಶೇಖರ, ಸೋಮ್ಲಾಪುರ ಹನುಮಂತಪ್ಪ, ಬಿ.ಎಂ. ಈಶ್ವರಪ್ಪ, ಕೆ.ಜಿ. ಶಿವಕುಮಾರ, ಶಿವನಹಳ್ಳಿ ರಮೇಶ್, ಅಲ್ತಾಫ್ ಹುಸೇನ್, ತಿಪ್ಪಮ್ಮ, ಪರಸಪ್ಪ, ವಿ. ಮುನಿಸ್ವಾಮಿ, ಎಸ್.ಡಿ. ತಿಪ್ಪೇಸ್ವಾಮಿ, ಜಿ.ಬಿ. ಲಿಂಗರಾಜು, ದಾಕ್ಷಾಯಣಮ್ಮ, ಉಮಾ ತೋಟಪ್ಪ, ಮಂಜಮ್ಮ, ಶಾಮನೂರು ಗೀತಾ ಮುರುಗೇಶ್, ಜೆ. ಪುಷ್ಪಲತಾ, ಎಂ.ಎಸ್. ಸಮೀವುಲ್ಲಾ, ಸುನೀತಾ ಭೀಮಣ್ಣ, ಜಯಶ್ರೀ, ಕೋಳಿ ಇಬ್ರಾಹಿಂ ಸಾಬ್, ಹುಚ್ಚವ್ವನಹಳ್ಳಿ ಅಜ್ಜಯ್ಯ, ಬಾಡದ ರವಿ, ಎಸ್.ಪಿ. ಹನುಮಂತರಾಜ್, ಎಸ್‌ಟಿಡಿ ತಿಪ್ಪೇಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.