ADVERTISEMENT

ಶ್ರೀಮಂತ–ಸಾಮಾನ್ಯನ ನಡುವೆ ಚುನಾವಣೆ

ರವೀಂದ್ರನಾಥ್‌ ಪರ ಪ್ರಚಾರ ಮಾಡಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 10:01 IST
Last Updated 6 ಮೇ 2018, 10:01 IST

ದಾವಣಗೆರೆ: ‘ಶ್ರೀಮಂತ–ಸಾಮಾನ್ಯ ವ್ಯಕ್ತಿ ನಡುವೆ ದಾವಣಗೆರೆಯಲ್ಲಿ ಚುನಾ ವಣೆ ನಡೆಯುತ್ತಿದ್ದು, ಯಾರನ್ನೂ ಆಯ್ಕೆ ಮಾಡಬೇಕು ಎಂಬ ಬಗ್ಗೆ ನೀವು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಮತದಾರರಿಗೆ ಹೇಳಿದರು.

ನಗರದ ಶಾಮನೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಪರ ಅವರು ಮತಯಾಚಿಸಿದರು.

ರವೀಂದ್ರನಾಥ್‌ ಸರಳ ಜೀವಿ; ಸಜ್ಜನಿಕೆಯ ವ್ಯಕ್ತಿ. ಅವರನ್ನು ಬೆಂಬಲಿ ಸಿದರೆ ಉತ್ತಮ ಕೆಲಸ ಮಾಡುತ್ತಾರೆ. ಹೀಗಾಗಿ ಅವರನ್ನೇ ಮತದಾರರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ನೀರಾವರಿ ಯೋಜನೆಗೆ ₹ 1 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಅಷ್ಟು ಹಣ ಸಾಕಾಗುವುದಿಲ್ಲ ಎನಿಸುತ್ತಿದೆ. ಹೀಗಾಗಿ ₹ 1.5 ಲಕ್ಷ ಕೋಟಿ ಮೀಸಲಿಡುತ್ತೇನೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ನೀಡುವ ಹಣವನ್ನು ₹ 2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ ಎಸ್.ಎ. ರವೀಂದ್ರನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮುಖಂಡರಾದ ಡಾ. ಎ.ಎಚ್‌. ಶಿವಯೋಗಿಸ್ವಾಮಿ, ಮುಕುಂ ದಪ್ಪ, ಆರುಂಡಿ ರುದ್ರೇಗೌಡ್ರು, ಎಚ್‌.ಎಂ. ರುದ್ರುಮುನಿಸ್ವಾಮಿ, ಕುರುಬರ ಸಿದ್ದಪ್ಪ ಅವರೂ ಇದ್ದರು.

ಸಾಲ ಮನ್ನಾ: ಬಿಎಸ್‌ವೈ ಪುನರುಚ್ಚಾರ

‘ಉತ್ತರಪ್ರದೇಶ, ಮಹಾರಾಷ್ಟ್ರದಂತೆ ಕರ್ನಾಟದಲ್ಲೂ ರೈತರ ಸಾಲ ಮನ್ನಾ ಮಾಡಲಾಗುವುದು’ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ‘ಪಕ್ಷ ಅಧಿಕಾರಕ್ಕೆ ಬಂದು, ಮೊದಲನೇ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ₹ 1 ಲಕ್ಷವರೆಗೆ ಸಾಲ ಮನ್ನಾ ಮಾಡುಲಾಗುವುದು. ಸಹಕಾರ ಸಂಘಗಳಲ್ಲಿನ ಸಾಲವನ್ನೂ ₹ 1 ಲಕ್ಷವರೆಗೆ ಮನ್ನಾ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ಕಾಂಗ್ರೆಸ್‌ ಸರ್ಕಾರ ಮನ್ನಾ ಮಾಡಿತು. ಆದರೆ, ಸಹಕಾರ ಸಂಘಗಳಿಗೆ ಹಣ ತುಂಬಲಿಲ್ಲ. ಇದರಿಂದ ಸಹಕಾರ ವ್ಯವಸ್ಥೆಗೆ ಧಕ್ಕೆಯಾಗಿದೆ. ಬಿಜೆಪಿ ಸರ್ಕಾರ ಸಹಕಾರ ಸಂಘಗಳ ಸಾಮರ್ಥ್ಯ ಬಲಪಡಿಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.