
ಪ್ರಜಾವಾಣಿ ವಾರ್ತೆದಾವಣಗೆರೆ: ರಾಷ್ಟ್ರದಲ್ಲಿ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವಂತೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ ಅವರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕ್ರಿಯಾಶೀಲ ಅಭಿವೃದ್ಧಿ ಸಲಹಾ ಸಮಿತಿ ಕೋರಿದೆ.
ಉತ್ತರ ಕೊರಿಯಾದಲ್ಲಿ ಉಚಿತ ಶಿಕ್ಷಣ ನೀಡುವ ಮೂಲಕ ಸಾಕ್ಷರತೆ ಪ್ರಮಾಣವನ್ನು ಶೇ. 97.5ಕ್ಕೆ ಹೆಚ್ಚಿಸಿದ ದಾಖಲೆ ಇದೆ. ಹೀಗಾಗಿ, ಕಡು ಬಡತನದಲ್ಲಿ ಬೆಳೆದು ಬಂದು ಖ್ಯಾತಿ ಗಳಿಸಿದ ವಿಜ್ಞಾನಿಯಾಗಿ, ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದ ಅಬ್ದುಲ್ ಕಲಾಂ ಅವರು ಈ ಬಗ್ಗೆ ಒತ್ತಡ ಹೇರಲು ಆಸಕ್ತಿ ತೋರಬೇಕು ಎಂದು ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಕೆ.ಜಿ. ಶರಣಪ್ಪ, ಕೆ. ಹಾಲೇಶ್, ಸೈಯದ್ ಷಾಹೀನ್, ಚಂದ್ರಶೇಖರ್, ಡಿ. ಅಸ್ಲಂ ಖಾನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.