ADVERTISEMENT

ಬ್ಯಾಂಕ್‌ನಲ್ಲಿ ಮಹಿಳೆ ಬ್ಯಾಗ್‌ನಿಂದ ಕದ್ದ ₹ 1 ಲಕ್ಷ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 8:09 IST
Last Updated 15 ಜುಲೈ 2025, 8:09 IST
<div class="paragraphs"><p>ಬಂಧನ </p></div>

ಬಂಧನ

   

ಸಂತೇಬೆನ್ನೂರು: ಇಲ್ಲಿನ ಕೆನರಾ ಬ್ಯಾಂಕ್‌ನಲ್ಲಿ ಜುಲೈ 11 ರಂದು ಚಿನ್ನದ ಸಾಲ ನವೀಕರಣಕ್ಕಾಗಿ ತಣಿಗೆರೆ ಗ್ರಾಮದ ಲತಾ ಚಲನ್ ಭರ್ತಿ ಮಾಡುವ ಸಂದರ್ಭದಲ್ಲಿ ಅವರ ಬ್ಯಾಗ್‌ನಿಂದ ₹ 1 ಲಕ್ಷ ಎಗರಿಸಿದ ಮಹಿಳೆಯರನ್ನು ಬಂಧಿಸಿದ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ.

ಅಂದೇ ಗ್ರಾಹಕರು ಹಿಡಿದು ಕೊಟ್ಟಿದ್ದ ಮಧ್ಯ ಪ್ರದೇಶದ ರಾಯಘಡ ಜಿಲ್ಲೆಯ ಪ್ರಿಯಾಂಕ ಸಿಸೊಡಿಯಾ ಹಾಗೂ ಪ್ರಿಯಾಂಕ ಎಂಬ ಕಳ್ಳಿಯರ ಮೂರು ವಿಚಾರಣೆ ನಡೆಸಿದಾಗ ಬಚ್ಚಿಟ್ಟಿದ್ದ ₹ 1 ಲಕ್ಷದ ಮಾಹಿತಿ ಸಿಕ್ಕಿದ್ದು ಹಣ ವಶಕ್ಕೆ ಪಡೆಯಲಾಗಿದೆ. ಓಡಿ ಹೋಗಿರುವ ಮತ್ತೊಬ್ಬ ಕಳ್ಳಿ ಸ್ವಪ್ನಾ ಇನ್ನೂ ಪತ್ತೆಯಾಗಿಲ್ಲ. 

ADVERTISEMENT

ಹಣ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಎಎಸ್‌ಪಿ ಸ್ಯಾಮ್ ವರ್ಗೀಸ್, ಸಿಪಿಐ ಲಿಂಗನಗೌಡ ನೆಗಳೂರು ಮಾರ್ಗದರ್ಶನದಲ್ಲಿ ಎಸ್ಐ ಜಿ.ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.