ADVERTISEMENT

ದಾವಣಗೆರೆ: 108 ಮಂದಿಗೆ ಕೊರೊನಾ, 188 ಮಂದಿ ಬಿಡುಗಡೆ

ನಾಲ್ವರು ಸಾವು * ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2206ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:22 IST
Last Updated 1 ಆಗಸ್ಟ್ 2020, 16:22 IST
ಮಾಯಕೊಂಡದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಸೀಲ್‌ಡೌನ್‌ ಮಾಡಲಾಯಿತು. ವೈದ್ಯಾಧಿಕಾರಿ ಗೋವಿಂದರಾಜ್ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಸದಸ್ಯ ರುದ್ರೇಶ್, ಪಿಡಿಒ ಸುಮಲತಾ, ಪೊಲೀಸ್‌, ಸಿಬ್ಬಂದಿ ಇದ್ದರು.
ಮಾಯಕೊಂಡದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಸೀಲ್‌ಡೌನ್‌ ಮಾಡಲಾಯಿತು. ವೈದ್ಯಾಧಿಕಾರಿ ಗೋವಿಂದರಾಜ್ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಸದಸ್ಯ ರುದ್ರೇಶ್, ಪಿಡಿಒ ಸುಮಲತಾ, ಪೊಲೀಸ್‌, ಸಿಬ್ಬಂದಿ ಇದ್ದರು.   

ದಾವಣಗೆರೆ: ಜಿಲ್ಲೆಯಲ್ಲಿ 13 ವೃದ್ಧರು, 6 ವೃದ್ಧೆಯರು, ಮೂವರು ಬಾಲಕರು, ಇಬ್ಬರು ಬಾಲಕಿಯರು ಸೇರಿ ಒಟ್ಟು 10 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದಾರೆ. ಒಂದೇ ದಿನ 188 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಉಸಿರಾಟದ ತೊಂದರೆ ಮತ್ತು ಮಧುಮೇಹದ ಸಮಸ್ಯೆ ಇದ್ದ ಬಸವರಾಜಪೇಟೆಯ 59 ವರ್ಷದ ವ್ಯಕ್ತಿ ಜುಲೈ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಮಾತ್ರ ಇದ್ದ ಚನ್ನಗಿರಿ ಪಿಡಬ್ಲ್ಯುಡಿ ರಸ್ತೆಯ 55 ವರ್ಷದ ಮಹಿಳೆ ಜುಲೈ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, 31ರಂದು ನಿಧನರಾದರು. ಉಸಿರಾಟದ ಸಮಸ್ಯೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಜಾಲಿನಗರದ 80 ವರ್ಷದ ವೃದ್ಧೆ ಜುಲೈ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಮೃತಪಟ್ಟರು. ರಕ್ತದೊತ್ತಡ, ಮಧುಮೇಹ, ಉಸಿರಾಟದ ಸಮಸ್ಯೆ ಇದ್ದ ಕೆಟಿಜೆ ನಗರ 63 ವರ್ಷದ ವೃದ್ಧ ಜುಲೈ 28ರಂದು ದಾಖಲಾಗಿ, ಅಂದೇ ನಿಧನರಾದರು. ಈ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿದೆ.

18ರಿಂದ 59 ವರ್ಷದವರೆಗಿನ 71 ಪುರುಷರು, 37 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ. ಡಿಎಆರ್‌ ಕ್ವಾರ್ಟರ್ಸ್‌ನ ನಾಲ್ವರಿಗೆ, ಡಿಎಸ್ಆರ್‌ ಕ್ವಾರ್ಟರ್ಸ್‌ನ ಒಬ್ಬರು, ಜ್ಞಾನಶಂಕರದ ಒಬ್ಬರು, ಚಿಗಟೇರಿ ಆಸ್ಪತ್ರೆ ಅಟೆಂಡರ್‌ಗೆ ಸೋಂಕು ತಗುಲಿದೆ.

ADVERTISEMENT

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿರುವ 11 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಎಸ್‌ಎಸ್‌ ಬಡಾವಣೆಯ ಏಳು ಮಂದಿ, ಭಗತ್‌ಸಿಂಗ್‌ ನಗರದ ಮೂವರು, ವಿನೋಬ ನಗರ, ಸರಸ್ವತಿ ನಗರದ ತಲಾ ಇಬ್ಬರಿಗೆ ಕೊರೊನಾ ಬಂದಿದೆ.

ಸಿದ್ಧವೀರಪ್ಪ ಬಡಾವಣೆ, ತರಳಬಾಳುಬಾಳು ಬಡಾವಣೆ, ಆಂಜನೇಯ ಬಡಾವಣೆ, ಜಯನಗರ, ಆವರಗೆರೆ, ಚಿಕ್ಕಮ್ಮಣಿ ಬಡಾವಣೆ, ನಿಟುವಳ್ಳಿ ಹೊಸಬಡಾವಣೆ, ಗಣೇಶ ಬಡಾವಣೆ, ಇಎಸ್‌ಐ ಆಸ್ಪತ್ರೆ ಬಳಿ, ವಿವೇಕಾನಂದ ಬಡಾವಣೆ, ಕೆಟಿಜೆ ನಗರ, ಡಿಸಿಎಂ ಟೌನ್‌ಶಿಪ್‌ನ ತಲಾ ಒಬ್ಬರಿಗೆ ಸೊಂಕು ತಗುಲಿದೆ. ಬಾತಿಯ ಇಬ್ಬರು, ಬೇತೂರು, ಕಕ್ಕರಗೊಳ್ಳದ ತಲಾ ಒಬ್ಬರು ಸೋಂಕಿಗೊಳಗಾಗಿದ್ದಾರೆ.

ಹರಿಹರ ತಾಲ್ಲೂಕಿನ ವಿಜಯನಗರದ, ಹಲಿವಾಣ, ಶಿಬಾರ ಸರ್ಕಲ್‌, ಕಾಳಿದಾಸನಗರ, ಹರಿಹರ, ಹಳದಕೆರೆ, ಆದಿಶಕ್ತಿನಗರ, ಜೆ.ಸಿ. ಬಡಾವಣೆ, ಕುಂಬಳೂರು, ಜೈಭೀಮ್‌ ನಗರದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಗಳೂರಿನ 8 ಮಂದಿಗೆ, ಹೊನ್ನಾಳಿ ತಾಲ್ಲೂಕಿನ ಕುಂಬಾರಗಿಂಡಿ ಕೇರಿ, ಒಡೇನಹಳ್ಳಿ, ಸವಳಂಗ, ಸರ್ವೇರ್‌ ಕೇರಿ, ದುರ್ಗಿಗುಡಿ, ಕುಂದೂರು ಸೇರಿ 8 ಮಂದಿಗೆ ಸೋಂಕು ಬಂದಿದೆ. ತುಮ್ಕೋಸ್‌ನ ಒಬ್ಬರು, ಸಂತೇಬೆನ್ನೂರಿನ ಇಬ್ಬರು, ಕಬ್ಬಾಳ, ಕತ್ತಲಗೆರೆ, ಕಂಚಿನಾಳ್‌ ಸೇರಿ ಚನ್ನಗಿರಿ ತಾಲ್ಲೂಕಿನ 6 ಮಂದಿಗೆ ವೈರಸ್‌ ತಗುಲಿದೆ.

ಚಿಕಿತ್ಸೆಗಾಗಿ ಇಲ್ಲಿನಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ, ಹಾವೇರಿ ಕುರುಬರಕೇರಿಯ ತಲಾ ಒಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ 2206 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1390 ಮಂದಿ ಗುಣಮುಖರಾಗಿದ್ದಾರೆ. 52 ಮಂದಿ ಮೃತಪಟ್ಟಿದ್ದಾರೆ. 764 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.