ADVERTISEMENT

14ರಿಂದ ಚೌಡಾಂಬಿಕಾದೇವಿ ಶರನ್ನವರಾತ್ರಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 4:45 IST
Last Updated 8 ಅಕ್ಟೋಬರ್ 2012, 4:45 IST

ದಾವಣಗೆರೆ: ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಲೇಬರ್ ಕಾಲೊನಿ (ಭಗತ್‌ಸಿಂಗ್ ನಗರ)ಯ ಚೌಡಾಂಬಿಕಾದೇವಿ ದೇವಸ್ಥಾನದಲ್ಲಿ ಅ. 14ರಿಂದ 24ರವರೆಗೆ ಶರನ್ನವರಾತ್ರಿ ಕಾರ್ಯಕ್ರಮ ಹಾಗೂ ದೇವಿಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಚೌಂಡಾಬಿಕಾ ದೇವಿ, ಶಿವಾಂಜನೇಯ, ಭೂತನಾಥೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಬೆಳ್ಳಿಹಬ್ಬದ ಅಂಗವಾಗಿ ನಾಗದೇವತೆಯ ಪ್ರತಿಷ್ಠಾಪನೆ ಹಾಗೂ ಹೋಮ, ನವರಾತ್ರಿ ಅಂಗವಾಗಿ ಚೌಡಾಂಬಿಕಾದೇವಿಗೆ ವಿವಿಧ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಕುಂಭಾಭಿಷೇಕ ಏರ್ಪಡಿಸಲಾಗಿದೆ.

14ರಂದು ಮುಂಜಾನೆ 5.30ಕ್ಕೆ ನಾಗದೇವತೆ ದೇವಸ್ಥಾನದ ಮುಂಭಾಗದಲ್ಲಿ ಹೋಮ, ಹವನ ಮತ್ತು ನಾಗದೇವತೆ ಪ್ರತಿಷ್ಠಾಪನೆ, 15ರಂದು ಮಹಾಲಯ ಅಮಾವಾಸ್ಯೆ ಪೂಜೆ, 16ರಂದು ಸಂಜೆ 6.30ಕ್ಕೆ ದೇವಿಘಟ ಸ್ಥಾಪನೆ, ಮಂಜುಳಾ ಮಹೇಶ್, ರೇಣುಕಾಶಾಸ್ತ್ರಿ ಮತ್ತು ಸಂಗಡಿಗರಿಂದ ಪ್ರತಿದಿನ ದೇವಿಪುರಾಣ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.

16ರಂದು ಕುಂಕುಮ ಪೂಜೆ, 17ರಂದು ಎಲೆಪೂಜೆ, 18ರಂದು ಆಭರಣ ಪೂಜೆ, 19ರಂದು ಲಕ್ಷ್ಮೀ ಪೂಜೆ, 20ರಂದು ಭುತ್ತಿ ಪೂಜೆ, 21ರಂದು ಕಾಲಭೈರವಿ ಪೂಜೆ, 22ರಂದು ಅರ್ಧನಾರೀಶ್ವರಿ ಪೂಜೆ, 23ರಂದು ಅರಿಶಿನ ಪೂಜೆ, 24ರಂದು ಆಭರಣ ಅಲಂಕಾರ ಪೂಜೆ ಏರ್ಪಡಿಸಲಾಗಿದೆ.

ಇದಲ್ಲದೇ, 19ರಂದು ಮಧ್ಯಾಹ್ನ 2ಕ್ಕೆ ಲಲಿತ ಪಂಚಮಿ ಅಂಗವಾಗಿ ಸಮಂಗಲೆಯರಿಂದ ಲಲಿತ ಸಹಸ್ರನಾಮ ಪೂಜೆ ನಡೆಯಲಿದೆ. 23ರಂದು ಬೆಳಿಗ್ಗೆ 6.30ಕ್ಕೆ 108 ಸುಮಂಗಲೆಯರಿಂದ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಮಂಗಳವಾದ್ಯ ದೊಂದಿಗೆ ಶ್ರೀದೇವಿ ಹಾಗೂ 108 ಕುಂಭಗಳ ಮೆರವಣಿಗೆ ಆಯೋಜಿಸಲಾಗಿದ್ದು, ಮಾಜಿ ಮೇಯರ್ ಎಂ.ಎಸ್. ವಿಠ್ಠಲ್ ಉದ್ಘಾಟಿಸುವರು.

ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. 24ರಂದು ಬೆಳಿಗ್ಗೆ 6.30ಕ್ಕೆ ಶ್ರೀದೇವಿಗೆ ಪಂಚಾಮೃತಾಭಿಷೇಕ ಉಡಿ ತುಂಬುವುದು, ಶಿವಾಂಜನೇಯ  ಸ್ವಾಮಿಗೆ ಪಂಚಾಮೃತಾಭಿಷೇಕ, ಭೂತನಾಥೇಶ್ವರ ಸ್ವಾಮಿ ಹಾಗೂ ನಾಗದೇವತೆಗೆ ಪಂಚಾಮೃತಾಭಿಷೇಕ ಕಾರ್ಯಕ್ರಮವಿದೆ.

24ರಂದು ಬೆಳಿಗ್ಗೆ 10ಕ್ಕೆ ದೇವಿಯ ಪುರಾಣ ಮಂಗಳ ಹಾಗೂ ಪ್ರಾರಂಭ ಸಂಜೆ 6ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಮರ ಸೇನೆಗೆ ಗುರುದೇವ ಆಯ್ಕೆ
ಕರುನಾಡ ಸಮರ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಜಿ.ಎ. ಗುರುದೇವ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಐಗೂರು ಬಿ.ಕೆ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.