ADVERTISEMENT

ದಾವಣಗೆರೆ: ಸಿವಿಲ್ ಕಂಟ್ರಾಕ್ಟರ್‌ಗೆ ₹ 18 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 6:28 IST
Last Updated 23 ಫೆಬ್ರುವರಿ 2024, 6:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾವಣಗೆರೆ: ಕೆಲಸಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ನಂಬಿಸಿ ಸಿವಿಲ್ ಕಂಟ್ರಾಕ್ಟರ್ ಒಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ₹ 18 ಲಕ್ಷ ವಂಚಿಸಿದ್ದಾನೆ.

  ಅಂಬಿಕಾ ನಗರದ ಸುಭಾಶ್ ಚಂದ್ರ ಮೋಸ ಹೋದವರು. ಗುಜರಾತ್‌ನ ವಡೋದರದಲ್ಲಿ ನಮ್ಮ ಕಚೇರಿ ಇದ್ದು, ಎಂಬಿಸಿಬಿ (ಮೆಟಲ್ ಬೀಮ್ ಕ್ರಷ್ ಬ್ಯಾರಿಯರ್) ಕಚ್ಚಾ ವಸ್ತುಗಳನ್ನು ಪೂರೈಸುವುದಾಗಿ ಹೇಳಿ ನೀತು ಎಂಟರ್‌ ಪ್ರೈಸಸ್ ಕಂಪನಿಗೆ ಸಂಬಂಧಿಸಿ ಕಂಪನಿಯ ಲೊಗೊ ಇರುವ ದಾಖಲೆಗಳನ್ನು ತೋರಿಸಿ ನಂಬಿಸಿದ್ದಾನೆ.

ADVERTISEMENT

ಸುಭಾಶ್ ಚಂದ್ರ ಕೆಲವು ಕಚ್ಚಾ ವಸ್ತುಗಳ ಪಟ್ಟಿ ಕಳುಹಿಸಿದಾಗ ಆ ವ್ಯಕ್ತಿ ಒಟ್ಟು ₹26.10 ಲಕ್ಷಗಳಾಗಲಿದ್ದು, ಮುಂಗಡವಾಗಿ ₹18 ಲಕ್ಷ ನೀಡಬೇಕಾಗುತ್ತದೆ ಎಂದು ಹೇಳಿದ. ಇದನ್ನು ನಂಬಿದ ಸುಭಾಶ್ ಚಂದ್ರ ₹18 ಲಕ್ಷವನ್ನು ಅಪರಿಚಿತನ ಅಕೌಂಟ್‌ಗೆ ಕಳುಹಿಸಿದರು. 9 ದಿನಗಳಾದರೂ ವಸ್ತುಗಳು ಬಾರಲಿಲ್ಲ. ಆತನು ನೀಡಿದ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಆಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ. 

ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.