ADVERTISEMENT

2 ತಿಂಗಳು ಕಳೆದರೂ ಸಿಗದ ಜಾತಿ, ಆದಾಯ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 9:35 IST
Last Updated 14 ಜೂನ್ 2011, 9:35 IST

ದಾವಣಗೆರೆ: ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳ ಪ್ರವೇಶಕ್ಕೆ ಅಗತ್ಯವಾದ ಜಾತಿ ಹಾಗೂ ಆದಾಯ  ಪ್ರಮಾಣಪತ್ರ  ಪಡೆಯಲು ವಿದ್ಯಾರ್ಥಿಗಳು ಜಾತಿ ಹಾಗೂ ಆದಾಯ ಜಾತಿಪತ್ರ ಮಾಡಿಸಲು ಪರದಾಟ ನಡೆಸುತ್ತಿದ್ದಾರೆ.

ಸೋಮವಾರ ವಿದ್ಯಾರ್ಥಿಗಳು ನಗರದ ತಾಲ್ಲೂಕು ಕಚೇರಿಯ ನೆಮ್ಮದಿ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತು ಗೋಳಾಡುತ್ತಿದ್ದುದೇ ಅದಕ್ಕೆ ಸಾಕ್ಷಿ.

ಶಾಲಾ-ಕಾಲೇಜು ಪ್ರವೇಶಕ್ಕೆ ಈ ದಾಖಲೆಗಳು ಅಗತ್ಯವಾಗಿವೆ. ಆದರೆ, 2 ತಿಂಗಳ ಹಿಂದೆ ಸಲ್ಲಿಸಿದ್ದ ಅರ್ಜಿಗಳು ಇಲ್ಲಿಯವರೆಗೂ ಬಂದಿಲ್ಲ. ಪ್ರತಿದಿನ ನೆಮ್ಮದಿ ಕೇಂದ್ರದ ಮುಂದೆ ಕಾಯುವುದೇ ಕೆಲಸವಾಗಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ವಿದ್ಯಾರ್ಥಿ ಎ. ರವಿಕುಮಾರ್ ತಮ್ಮ ಸಂಕಷ್ಟ ತೋಡಿಕೊಂಡರು.

ದಾವಣಗೆರೆ ದಕ್ಷಿಣ ವಲಯಕ್ಕೆ ಕೇವಲ ಒಂದೇ ನೆಮ್ಮದಿ ಕೇಂದ್ರವಿದೆ. ಇದರಿಂದ ಎಲ್ಲರೂ ಇಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬೇಕಾಗಿದೆ. ಇದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ವಿದ್ಯಾರ್ಥಿಗಳಿಗೆ ಆದಾಯ ಪ್ರಮಾಣಪತ್ರದ ಆವಶ್ಯಕತೆ ಹೆಚ್ಚಿದೆ. ಆದಾಯ ಪ್ರಮಾಣ ಪತ್ರವಿದ್ದರೆ ್ಙ 800ರಿಂದ 900 ಶುಲ್ಕ ಕಟ್ಟಬಹುದು. ಆದರೆ, ಈಗ ್ಙ 4,000ರವರೆಗೆ ಶುಲ್ಕ ಕಟ್ಟುವಂತಾಗಿದೆ ಎಂದು ಆಜಂ ರಜ್ವಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.