ADVERTISEMENT

28, 29ರಂದು ರಥೋತ್ಸವ

ಅಸಗೋಡು: ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:03 IST
Last Updated 25 ಏಪ್ರಿಲ್ 2013, 9:03 IST

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ ಏ. 28ರಿಂದ ಶಂಭುಲಿಂಗೇಶ್ವರ ಸ್ವಾಮಿ ಹಾಗೂ ಹನುಮಂತ ದೇವರ ರಥೋತ್ಸವ ಆಯೋಜಿಸಲಾಗಿದೆ.

28ರಂದು ಸಂಜೆ 5ಕ್ಕೆ ಶಂಭುಲಿಂಗೇಶ್ವರ ಸ್ವಾಮಿಯ ರಥೋತ್ಸವ ನೆರವೇರಲಿದೆ. 29ರಂದು ಸಂಜೆ 5ಕ್ಕೆ ಹನುಮಂತ ದೇವರ ರಥೋತ್ಸವ ನಡೆಯಲಿದೆ. 30ರಂದು ಬೆಳಿಗ್ಗೆ ಶಂಭುಲಿಂಗೇಶ್ವರ ಹಾಗೂ ಹನುಮಂತದೇವರ ಓಕುಳಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ರಥೋತ್ಸವ ಅಂಗವಾಗಿ ಏ. 29 ಹಾಗೂ 30ರಂದು ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಕುಸ್ತಿ ಪಟುಗಳಿಗೆ ಮದಕರಿ ನಾಯಕ ಸಂಘದ ವತಿಯಿಂಧ ಊಟದ ವ್ಯವಸ್ಥೆ ಮಾಡಲಾಗುವುದು. ನಾಟಕ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ.

ರಥೋತ್ಸವಕ್ಕಾಗಿ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಶಿಲಾವಿನ್ಯಾಸ ಮಂಟಪ ರಚಿಸಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಆಗಮಿಸಬೇಕು ಎಂದು ದೇವಸ್ಥಾನ ಸಮಿತಿ ವ್ಯವಸ್ಥಾಪಕರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.