ADVERTISEMENT

ದಾವಣಗೆರೆ: ಕೋವಿಡ್‌ನಿಂದ 466 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:58 IST
Last Updated 19 ಸೆಪ್ಟೆಂಬರ್ 2020, 3:58 IST

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್–19ನಿಂದ ಶುಕ್ರವಾರ 466 ಮಂದಿ ಬಿಡುಗಡೆಯಾಗಿದ್ದಾರೆ. 146 ಮಂದಿಗೆ ಸೋಂಕು ದೃಢಪಟ್ಟಿದೆ.

14,243 ಮಂದಿ ಒಟ್ಟು ಸೋಂಕಿತರು ಇದ್ದು, 11,199 ಮಂದಿ ಕೋವಿಡ್–19ನಿಂದ ಗುಣಮುಖರಾಗಿದ್ದು, 2,816 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 228 ಮಂದಿ ಮೃತಪಟ್ಟಿದ್ದಾರೆ. 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗುವಿಗೆ ಕೊರೊನಾ
ನ್ಯಾಮತಿ ವರದಿ: ತಾಲ್ಲೂಕಿನ ಚಟ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನ ಬಡಾವಣೆಯ ಒಂದು ವರ್ಷದ ಹೆಣ್ಣುಮಗುವಿಗೆ ಹಾಗೂ ಇಬ್ಬರು ಮಹಿಳೆಯರಿಗೆ, ಸಮೀಪದ ದೊಡ್ಡೆತ್ತಿನಹಳ್ಳಿ ಗ್ರಾಮದ 50 ವರ್ಷದ ಪುರುಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ADVERTISEMENT

ಸಮುದಾಯ ಆಸ್ಪತ್ರೆಯಲ್ಲಿ ಶುಕ್ರವಾರ 6 ಜನರಿಗೆ ಆರ್‌ಎಟಿ ಮತ್ತು ವಿಟಿಎಂ ಹಾಗೂ 4 ಜನರಿಗೆ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ನಾಲ್ವರಿಗೆ ಸೋಂಕು ಪತ್ತೆಯಾಗಿದೆ ಎಂದು ಸಮುದಾಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರೇಣುಕಾನಂದ ಮೆಣಸಿನಕಾಯಿ ಮಾಹಿತಿ ನೀಡಿದರು.

ಇಬ್ಬರಿಗೆ ಪಾಸಿಟಿವ್
ಸಾಸ್ವೆಹಳ್ಳಿ ವರದಿ
: ಹೋಬಳಿಯ ಹೊಸಹಳ್ಳಿ ಕ್ಯಾಂಪ್‌ನ 58 ವರ್ಷದ ಪುರುಷ ಹಾಗೂ ಕುಳಗಟ್ಟೆಯ 38 ವರ್ಷದ ಪುರುಷ ಸೇರಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಉಪತಹಶೀಲ್ದಾರ್ ಎಸ್.‌ ಪರಮೇಶ್ ತಿಳಿಸಿದರು.

32 ಮಂದಿಗೆ ಕೊರೊನಾ
ಮಲೇಬೆನ್ನೂರು ವರದಿ:
ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ 32 ಮಂದಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಪಟ್ಟಣದ ನಾಲ್ವರು ಪುರುಷ, ಇಬ್ಬರು ಮಹಿಳೆಯರು, ಕುಂಬಳೂರಿನ 5 ಮಂದಿ ಪುರುಷರು, ಒಬ್ಬ ಮಹಿಳೆ, ಯಲವಟ್ಟಿಯ ಒಬ್ಬ ಪುರುಷ, ಗೋವಿನಹಾಳು ಗ್ರಾಮದ ಆರು ಮಹಿಳೆಯರು, ನಿಟ್ಟೂರು ಗ್ರಾಮದ ಆರು ಪುರುಷ, ಐವರು ಮಹಿಳೆಯರು, ಭಾನುವಳ್ಳಿ, ಧೂಳೆಹೊಳೆಯ ತಲಾ ಇಬ್ಬರು ಪುರುಷರಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕು ಇಲ್ಲ: ಸ್ಪಷ್ಟನೆ
ಸಂತೇಬೆನ್ನೂರು ವರದಿ:
‘ನನಗೆ ಕೋವಿಡ್ ಸೋಂಕು ಇಲ್ಲ. ರ‍್ಯಾಂಡಮ್ ಹಾಗೂ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ’ ಎಂದುಜಿಲ್ಲಾ ಪಂಚಾಯಿತಿ ಸದಸ್ಯ ಪಿ.ವಾಗೀಶ್ ತಿಳಿಸಿದರು.

‘ಕ್ವಾರಂಟೈನ್‌ನಲ್ಲಿ ಇರದೆ ಜನರ ಮಧ್ಯೆ ಓಡಾಡುತ್ತಿದ್ದೀನಿ ಎಂದು ಕೆಲವರು ಆಕ್ಷೇಪಿಸಿದ್ದರು. ನಾನು ಹಾಗೂ ನನ್ನ ಪತ್ನಿ ಕೋವಿಡ್ ಪರೀಕ್ಷೆ ಮಾಡಿಸಿದೆವು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.