ಪ್ರಜಾವಾಣಿ ವಾರ್ತೆ
ದಾವಣಗೆರೆ: ಜಿಲ್ಲೆಯ 39 ಮಂದಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, 94 ಮಂದಿ ಗುಣಮುಖರಾಗಿದ್ದಾರೆ.
ದಾವಣಗೆರೆ ನಗರ ಹಾಗೂ ತಾಲ್ಲೂಕಿನ 22, ಹರಿಹರ ತಾಲ್ಲೂಕಿನ 7, ಚನ್ನಗಿರಿ ತಾಲ್ಲೂಕಿನ 4, ಹೊನ್ನಾಳಿ ತಾಲ್ಲೂಕಿನ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬಿಡುಗಡೆಗೊಂಡವರಲ್ಲಿ ದಾವಣಗೆರೆ ನಗರ ತಾಲ್ಲೂಕಿನ 39, ಹರಿಹರ ತಾಲ್ಲೂಕಿನ 22, ಜಗಳೂರು ತಾಲ್ಲೂಕಿನ 6, ಚನ್ನಗಿರಿ ತಾಲ್ಲೂಕಿನ 11, ಹೊನ್ನಾಳಿ ತಾಲ್ಲೂಕಿನ 14 ಹಾಗೂ ಹೊರ ಜಿಲ್ಲೆಯ ಇಬ್ಬರು
ಸೇರಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 21,083 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 20,414 ಮಂದಿ ಗುಣಮುಖರಾಗಿದ್ದಾರೆ. 261 ಮಂದಿ ಮೃತಪಟ್ಟಿದ್ದು, 408 ಸಕ್ರಿಯ ಪ್ರಕರಣಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.