ADVERTISEMENT

ಹರಮಘಟ್ಟ: ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 6:56 IST
Last Updated 3 ಡಿಸೆಂಬರ್ 2022, 6:56 IST
ನ್ಯಾಮತಿ ಸಮೀಪದ ಮುಸ್ಸೆನಾಳ್ ಪಕ್ಕದ ಹರಮಗಟ್ಟ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೋನಿಗೆ ಬಿದ್ದ ಚಿರತೆ
ನ್ಯಾಮತಿ ಸಮೀಪದ ಮುಸ್ಸೆನಾಳ್ ಪಕ್ಕದ ಹರಮಗಟ್ಟ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೋನಿಗೆ ಬಿದ್ದ ಚಿರತೆ   

ನ್ಯಾಮತಿ: ತಾಲ್ಲೂಕಿನ ಗಡಿಭಾಗ ಮುಸ್ಸೆನಾಳ್ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದ ಚಿರತೆ ಹರಮಘಟ್ಟ ಅರಣ್ಯ ಪ್ರದೇಶದಲ್ಲಿ ಇಟ್ಟಿದ್ದ ಬೋನಿಗೆ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದೆ.

ಈಚೆಗೆ ಮುಸ್ಸೆನಾಳ್ ಗ್ರಾಮದ ಬಳಿ ಚಿರತೆಯೊಂದು ಆಕಳು ಬಲಿ ಪಡೆದ ಮೇಲೆ ಜಾಗೃತಗೊಂಡ ಅರಣ್ಯ ಇಲಾಖೆಯವರು ಗ್ರಾಮದ ಹೊರವಲಯದಲ್ಲಿ ಬೋನು ಇಟ್ಟಿದ್ದರು. ಹರಮಘಟ್ಟ ಅರಣ್ಯದಲ್ಲೂ ಚಿರತೆ ಹಸು ಕೊಂದಿರುವ ಮಾಹಿತಿ ವರದಿಯಾಗಿತ್ತು.

‘ಶಿವಮೊಗ್ಗ ಅರಣ್ಯ ಇಲಾಖೆ ಸಹಕಾರದೊಂದಿಗೆ ಮುಸ್ಸೇನಾಳ್ ಮತ್ತು ಹರಮಘಟ್ಟ ಮಧ್ಯೆ ಗುರುವಾರ ಸಂಜೆ ಬೋನು ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಸುಮಾರು 4 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ’ ಎಂದು ವಲಯ ಅರಣ್ಯಾಧಿಕಾರಿ ಕೆ.ಆರ್.ಚೇತನ ಮಾಹಿತಿ ನೀಡಿದರು.

ADVERTISEMENT

‘ಫಲವನಹಳ್ಳಿಯಲ್ಲಿ ಮಹಿಳೆ ಬಲಿ ಪಡೆದ ಚಿರತೆ, ಈಗ ಹರಮಘಟ್ಟ ಭಾಗದಲ್ಲಿ ಸಿಕ್ಕಿರುವ ಚಿರತೆ ಸೇರಿ ಒಟ್ಟು 3 ಚಿರತೆಗಳನ್ನು ಸೆರೆ ಹಿಡಿಯುವ ಮೂಲಕ ಸಾರ್ವಜನಿಕರ ಆತಂಕವನ್ನು ದೂರಮಾಡಲಾಗಿದೆ. ಸೆರೆಸಿಕ್ಕ ಚಿರತೆಗಳನ್ನು ಶಿವಮೊಗ್ಗ ಸಿಂಹಧಾಮದಲ್ಲಿ ಇಡಲಾಗಿದೆ’ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಇನಾಯತ್ ಷರಿಫ್‌, ಬರ್ಕತ್‌ಆಲಿ, ಬೀಟ್ ಫಾರೆಸ್ಟರ್ ಎಚ್.ಕೃಷ್ಣಮೂರ್ತಿ, ಅಂಜಲಿ ಮತ್ತು ವನಪಾಲಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.