ADVERTISEMENT

ಆಲೂರು: ಸ್ಫೋಟಕ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 4:05 IST
Last Updated 25 ಫೆಬ್ರುವರಿ 2021, 4:05 IST
ದಾವಣಗೆರೆ ತಾಲ್ಲೂಕಿನ ಆಲೂರು ಕಲ್ಲು ಕ್ವಾರಿಗೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿನಯಾ ಬಣಕಾರ್ ಭೇಟಿ ನೀಡಿದ್ದರು.
ದಾವಣಗೆರೆ ತಾಲ್ಲೂಕಿನ ಆಲೂರು ಕಲ್ಲು ಕ್ವಾರಿಗೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ವಿನಯಾ ಬಣಕಾರ್ ಭೇಟಿ ನೀಡಿದ್ದರು.   

ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಸ್ಥಳಕ್ಕೆ ಬುಧವಾರ ಪೊಲೀಸರು ಭೇಟಿ ನೀಡಿದಾಗ ಗ್ರಾಮದ ಸರ್ವೇ ನಂ.68/9ರಲ್ಲಿಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ಪತ್ತೆಯಾಗಿದೆ.

ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬ್ಲಾಸ್ಟಿಂಗ್ ತಂಡದೊಂದಿಗೆ ಪೊಲೀಸರು ಭೇಟಿ ನೀಡಿದಾಗ ಕ್ವಾರಿಯಲ್ಲಿ ಯಾರೊಬ್ಬರೂ ಇರಲಿಲ್ಲ. ಈ ಸಂಬಂಧ ಕ್ವಾರಿ ಆಲೂರುಹಟ್ಟಿ ಗ್ರಾಮದ ಮಾಲೀಕ ಕುಮಾರನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.

ಎಸ್ಪಿ ಮಾರ್ಗದರ್ಶನದಲ್ಲಿ , ಪಿಎಸ್‌ಐ ಅಶ್ವಿನ್ ಕುಮಾರ್, ಭೂ ವಿಜ್ಞಾನ ಅಧಿಕಾರಿ ವಿನಯಾ ಬಣಕಾರ್, ಸಿಬ್ಬಂದಿ ಜಿ.ಎಲ್. ಮಂಜುನಾಥ್, ಎಸ್. ಮಂಜನಗೌಡ, ನಾಗರಾಜ್, ರಾಜು ಲಮಾಣಿ, ಹನುಮಂತಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.