ADVERTISEMENT

ಅಮಾವಾಸ್ಯೆ: ಉಕ್ಕಡಗಾತ್ರಿಗೆ ಭಕ್ತರ ದಂಡು

ತುಂಗಭದ್ರಾ ನದಿಯಲ್ಲಿ ಮಿಂದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:27 IST
Last Updated 26 ಸೆಪ್ಟೆಂಬರ್ 2022, 4:27 IST
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಗದ್ದುಗೆಯಲ್ಲಿ  ಭಾನುವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಅಜ್ಜಯ್ಯನ ದರ್ಶನ ಪಡೆದರು
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಗದ್ದುಗೆಯಲ್ಲಿ  ಭಾನುವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಅಜ್ಜಯ್ಯನ ದರ್ಶನ ಪಡೆದರು   

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಗದ್ದುಗೆಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಕ್ತರ ದಂಡು ಹರಿದುಬಂತು.

ಭಕ್ತರುಮೂಲ ಗದ್ದುಗೆಗೆ ವಿಶೇಷ ಪೂಜೆ ರುದ್ರಾಭಿಷೇಕ, ಜಲಾಭಿಷೇಕವನ್ನು ನೆರವೇರಿಸಿದರು. ಕರಿಬಸವೇಶ್ವರ ಸ್ವಾಮಿಗೆ ಮಾಡಿದ್ದ ಪುಷ್ಪಾಲಂಕಾರ ಗಮನ ಸೆಳೆಯಿತು.

ನದಿಪಾತ್ರದಲ್ಲಿ ಟ್ರಸ್ಟ್ ವತಿಯಿಂದಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ದೇವಾಲಯದ ಸಮಿತಿಯವರು ನದಿಗೆ ಇಳಿಯದಂತೆ ಮೈಕ್ ಮೂಲಕ ಮನವಿ ಮಾಡುತ್ತಿದ್ದುದು ಕಂಡುಬಂತು. ಆದರೂ ಹೆಚ್ಚಿನ ಸಂಖ್ಯೆಯ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು.

ADVERTISEMENT

ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಾನುವಾರ ರಜಾ ದಿನದ ಪ್ರಯುಕ್ತ ಭಕ್ತರು ಹಾಗೂ ವಾಹನಗಳ ಭರಾಟೆ ಹೆಚ್ಚಾಗಿತ್ತು.ಪೊಲೀಸರು ಹಾಗೂ ಸ್ವಯಂ ಸೇವಕರು ಭದ್ರತೆಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.