
ಪ್ರಜಾವಾಣಿ ವಾರ್ತೆ
ಮಾಯಕೊಂಡ: ಗ್ರಾಮದ ಕೈದಾಳ್ ಬಸವರಾಜಪ್ಪ ಎಂಬ ರೈತ ಸಂಗ್ರಹಿಸಿದ್ದ ಅಡಿಕೆ ಸಿಪ್ಪೆ ರಾಶಿಗೆ ಭಾನುವಾರ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆ ಆವರಿಸಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಯಿತು.
ರೈತ ಬಸವರಾಜಪ್ಪ ಎರಡು ತಿಂಗಳಿಂದ ತಮ್ಮ ಮನೆಯ ಖಾಲಿ ನಿವೇಶನದಲ್ಲಿ ಅಡಿಕೆ ಸಿಪ್ಪೆಯನ್ನ ಸಂಗ್ರಹಿಸಿದ್ದರು. ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ದಟ್ಟವಾಗಿ ಹೊಗೆ ಹರಡಿದ್ದು ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿ, ಭಾರಿ ಅನಾಹುತ ತಪ್ಪಿಸಿದರು.
ಅಗ್ನಿಶಾಮಕ ಸಿಬ್ಬಂದಿ ವೆಂಕಟೇಶ್ ಹೆಚ್, ನಯಾಜ್, ಆನಂದ್, ಲೋಹಿತಾಶ್ವ ಬೆಂಕಿ ನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.