
ಪ್ರಜಾವಾಣಿ ವಾರ್ತೆ
ಸಿರಿಗೆರೆ: ಭರಮಸಾಗರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕೊಳಹಾಳ್ ಗ್ರಾಮದ ಉಮಾಮಹೇಶ್ವರಪ್ಪ ಅವರ ತೋಟದಲ್ಲಿ ಕಳ್ಳರು ₹ 1 ಲಕ್ಷ ಬೆಲೆಯ 13 ಕ್ವಿಂಟಲ್‌ನಷ್ಟು ಹಸಿ ಅಡಿಕೆಯನ್ನು ಕಳವು ಮಾಡಿದ್ದಾರೆ.
ಕೊಳಹಾಳ್- ಅರಬಗಟ್ಟ ಮಾರ್ಗದಲ್ಲಿರುವ ಅಡಿಕೆ ತೋಟಕ್ಕೆ ಭಾನುವಾರ ರಾತ್ರಿ ನುಗ್ಗಿರುವ ಕಳ್ಳರು ಎರಡು ವಾಹನಗಳಲ್ಲಿ ಹಸಿ ಅಡಿಕೆಯನ್ನು ಗೊನೆಗಳ ಸಮೇತ ಕದ್ದೊಯ್ದಿದ್ದಾರೆ.
ಭರಮಸಾಗರ ಸುತ್ತಮುತ್ತ ಈಗಾಗಲೇ ನಾಲ್ಕಾರು ಕಡೆ ಅಡಿಕೆ ಕಳ್ಳತನ ಆಗಿದ್ದರೂ, ಬೆಳೆಗಾರರು ಪೊಲೀಸ್ ಠಾಣೆಯಲ್ಲಿ ದೂರು ನೀಡದಿರುವುದನ್ನು ಗಮನಿಸಿಯೇ ಕಳ್ಳರು ತಮ್ಮ ಕೃತ್ಯವನ್ನು ಮುಂದುವರಿಸಿದ್ದಾರೆ.
ಭರಮಸಾಗರ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.