ADVERTISEMENT

ಜಲ ಸಂಪತ್ತಿನ ಸಂರಕ್ಷಣೆ ಎಲ್ಲರ ಹೊಣೆ: ಶಾಸಕ ಬಿ.ದೇವೇಂದ್ರಪ್ಪ

ಜಗಳೂರು: ಅಟಲ್ ಭೂಜಲ‌ ಯೋಜನೆಯ ಜನಜಾಗೃತಿ ಜಾಥಾಕ್ಕೆ‌ ಚಾಲನೆ‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 16:03 IST
Last Updated 24 ಆಗಸ್ಟ್ 2023, 16:03 IST
ಜಗಳೂರಿನಲ್ಲಿ ಗುರುವಾರ ಶಾಸಕ ಬಿ. ದೇವೇಂದ್ರಪ್ಪ ಅವರು ಅಟಲ್ ಭೂಜಲ‌ ಯೋಜನೆಯ ಜನಜಾಗೃತಿ ಜಾಥಾಕ್ಕೆ‌ ಚಾಲನೆ‌ ನೀಡಿ ಮಾತನಾಡಿದರು
ಜಗಳೂರಿನಲ್ಲಿ ಗುರುವಾರ ಶಾಸಕ ಬಿ. ದೇವೇಂದ್ರಪ್ಪ ಅವರು ಅಟಲ್ ಭೂಜಲ‌ ಯೋಜನೆಯ ಜನಜಾಗೃತಿ ಜಾಥಾಕ್ಕೆ‌ ಚಾಲನೆ‌ ನೀಡಿ ಮಾತನಾಡಿದರು    

ಜಗಳೂರು: ‘ಅಮೂಲ್ಯ ಜಲ ಸಂಪತ್ತಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಮಳೆ‌ ನೀರನ್ನು ಸಂಗ್ರಹಣೆ ಮಾಡಿ ಮಿತವಾಗಿ ಬಳಕೆಮಾಡಬೇಕು’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಹಳೇ‌ಬಸ್ ನಿಲ್ದಾಣದ ಬಳಿ ಗುರುವಾರ ಅಟಲ್ ಭೂಜಲ‌ ಯೋಜನೆಯ ಜನಜಾಗೃತಿ ಜಾಥಾಕ್ಕೆ‌ ಚಾಲನೆ‌ ನೀಡಿ ಅವರು ಮಾತನಾಡಿದರು.

‘ಅಂತರ್ಜಲ‌ ಹೆಚ್ಚಳಕ್ಕೆ ಅಟಲ್ ಭೂಜಲ ಯೋಜನೆ ಸಹಕಾರಿಯಾಗಲಿದೆ. ತಾಲ್ಲೂಕು ಕಳೆದ ವರ್ಷ ಅತಿವೃಷ್ಟಿಗೆ ತುತ್ತಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ಬೆಳೆ ನಾಶವಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಮುಂಗಾರು ಬೆಳೆಗಳು ಬಾಡುತ್ತಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಜನ– ಜಾನುವಾರು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ’ ಎಂದು ಹೇಳಿದರು.

ADVERTISEMENT

‘ಪ್ರಕೃತಿಯಲ್ಲಿ ನೀರು, ಗಾಳಿ, ಬೆಳಕು, ದೇವರು ಕೊಟ್ಟ ಭಿಕ್ಷೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕೂ ಪರದಾಡುವಾಗ ಪರಿಸರದ ಮಹತ್ವ ಅರಿವಾಗಿದೆ. ಪ್ರಕೃತಿ ವಿನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ. ಪ್ರತಿಯೊಬ್ಬರೂ ಪ್ರಕೃತಿ ಉಳಿವಿಗಾಗಿ ಸಂಕಲ್ಪಮಾಡಬೇಕು’ ಎಂದು ಹೇಳಿದರು.

ನೋಡೆಲ್ ಅಧಿಕಾರಿ ಆರ್.ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕೃಷಿ ಇಲಾಖೆ‌ ಅಧಿಕಾರಿ ಮಿಥುನ್ ಕಿಮಾವತ್, ನೀರಾವರಿ ಇಲಾಖೆಯ ಚಂದ್ರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್, ಮುಖಂಡರಾದ ಓಮಣ್ಣ, ಶಂಭುಲಿಂಗಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.