ADVERTISEMENT

ದಾವಣಗೆರೆ | ಪತ್ನಿ ಕೊಲೆ ಯತ್ನ; ವ್ಯಕ್ತಿಗೆ 10 ವರ್ಷ ಕಾರಾಗೃಹ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:58 IST
Last Updated 7 ಅಕ್ಟೋಬರ್ 2025, 5:58 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ದಾವಣಗೆರೆ: ಪತ್ನಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ವ್ಯಕ್ತಿಯೊಬ್ಬರಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹24,000 ದಂಡ ವಿಧಿಸಿ ತೀರ್ಪು ವಿಧಿಸಿದೆ. 

ಚಿತ್ರದುರ್ಗದ ಮಂಡಕ್ಕಿ ಭಟ್ಟಿಯ ನಿವಾಸಿ ಸಲೀಂ ಶಿಕ್ಷೆಗೊಳಗಾದ ಅಪರಾಧಿ. 

ADVERTISEMENT

2024ರ ಏಪ್ರಿಲ್‌ 11ರಂದು ಪತ್ನಿ ಅಸ್ಮಾ ಖಾನ್ ಅವರಿಗೆ ಸಲೀಂ ಹೊಟ್ಟೆ, ಎದೆ, ಬೆನ್ನು ಹಾಗೂ ತೊಡೆಗೆ 6 ಬಾರಿ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. 

ತನಿಖಾಧಿಕಾರಿ, ಪಿಎಸ್‌ಐ ಮಹಮ್ಮದ್ ಸೈಫುದ್ದೀನ್ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. 

ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯ ತೀರ್ಪು ಪ್ರಕಟಿಸಿದರು. ಸರ್ಕಾರಿ ವಕೀಲ ಸತೀಶ್ ಕೆ.ಎಸ್. ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.