ಕಡರನಾಯ್ಕನಹಳ್ಳಿ: ‘ಆರ್ಥಿಕ ಸಮಸ್ಯೆಯಿಂದಾಗಿ ಭಾರತದಲ್ಲಿ ಶೇ 50ಕ್ಕಿಂತ ಹೆಚ್ಚು ಜನರು ಸರಿಯಾದ ಚಿಕಿತ್ಸೆ ಇಲ್ಲದೆ ವಂಚಿತರಾಗಿದ್ದಾರೆ. ಪಿಎಂಜೆಎವೈ ಜನಸಾಮಾನ್ಯರಿಗೆ ಸರಿಯಾದ ಆರೋಗ್ಯ ಸೇವೆಗಳನ್ನು ನೀಡುತ್ತದೆ. ಕಡಿಮೆ ವೈದ್ಯಕೀಯ ವೆಚ್ಚದಲ್ಲಿ ರೋಗ ತಡೆಗಟ್ಟುವ ಗುರಿಯನ್ನು ಹೊಂದಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರಕುಮಾರ್ ಹೇಳಿದರು.
ಸಮೀಪದ ನಂದಿಗುಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಾವಣಗೆರೆ ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚಿನ ಅರಿವು ಪಡೆಯಬೇಕು. ಯೋಗ, ಯೋಗಾಸನ, ಧ್ಯಾನದಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ’ ಎಂದು ತಿಳಿಸಿದರು.
ವೈದ್ಯರು ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ಮಾಡಿ, ಕೆಲ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಔಷಧಿ ನೀಡಿದರು.
ಯೋಗ ತರಬೇತುದಾರರಾದ ಶ್ವೇತಾ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಯುಷ್ ವೈದ್ಯರಾದ ಎಸ್.ಎಸ್. ಸುಚಿತ್ರಾ, ಡಾ.ರೇವ್ಯಾನಾಯ್ಕ್,ಡಾ.ಯೋಗೀಶ್ವರ ಗೌಡ,ಎಂ ಸಿ ಡಾ.ಸುರೇಶ್ ಕುಮಾರ್,ಡಾ.ಸಿದ್ದೇಶ್,ಈ ಬಿಸನಳ್ಳಿ,ವಸತಿ ನಿಲಯದ ಸಿಬ್ಬಂದಿಗಳು, ಆಯುಷ್ ಸಿಬ್ಬಂದಿ ಮತ್ತು ಯೋಗ ತರಬೇತುದಾರರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.