ದಾವಣಗೆರೆಯ ಆನೆಕೊಂಡದಲ್ಲಿ ಸೋಮವಾರ ನಡೆದ ಬಸವೇಶ್ವರ ಕಾರ್ಣಿಕದಲ್ಲಿ ಕಾರ್ಣಿಕ ನುಡಿದ ದಾಸಪ್ಪ
– ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆ: ‘ಮಹಾತಾಯಿ ಬಲೆ ಬಿಸ್ಯಾಳಲೇ ಎಚ್ಚರ’ ಇದು ಐತಿಹಾಸಿಕ ಆನೆಕೊಂಡದ ಬಸವೇಶ್ವರ ಕಾರ್ಣಿಕ ನುಡಿ.
ಇಲ್ಲಿನ ಆನೆಕೊಂಡ ಕ್ಷೇತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಸವೇಶ್ವರ ಕಾರ್ಣಿಕ ಮಹೋತ್ಸವ ಸೋಮವಾರ ನೆರವೇರಿತು.
ನಿಟುವಳ್ಳಿಯ ದುರ್ಗಾಂಬಿಕಾ ದೇವಿ, ನೀಲಾನಹಳ್ಳಿ ಆಂಜನೇಯ ಸ್ವಾಮಿ ಹಾಗೂ ಆನೆಕೊಂಡದ ಬಸವೇಶ್ವರ ಸೇರಿದಂತೆ ಹಲವು ದೇವರ ಉತ್ಸವ ಮೂರ್ತಿಗಳು ಮಟ್ಟಿಕಲ್ ಮರಡಿ ಬಸವೇಶ್ವರ ದೇಗುಲದ ಆವರಣಕ್ಕೆ ಸೋಮವಾರ ಸಂಜೆ ಸೇರಿದವು. ಉತ್ಸವಮೂರ್ತಿಗಳನ್ನು ತರಹೇವಾರಿ ಫಲ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ದೇವರ ಉತ್ಸವ ಮೂರ್ತಿಗಳೊಂದಿಗೆ ಸಾವಿರಾರು ಭಕ್ತರು ದೇಗುಲದ ಆವರಣಕ್ಕೆ ಧಾವಿಸಿದ್ದರು. ಕಾರ್ಣಿಕ ಕಂಬಕ್ಕೆ ಪ್ರದಕ್ಷಿಣೆ ಹಾಕಿದ ದಾಸಪ್ಪ, ಬಳಿಕ ಕಾರ್ಣಿಕ ನುಡಿದರು. ‘ರಾಮ, ರಾಮ ಎಂದು ನುಡಿದೀತ್ತಲೆ.. ನರಲೋಕದ ಜನಕೆ ಆನೆ ಚರಗ ಹೊಡೆದಿತ್ತಲೇ.. ರಾಮ ಬಾಣ ಹೂಡ್ಯಾನಲೇ.. ಮಹಾತಾಯಿ ಬಲೆ ಬಿಸ್ಯಾಳಲೇ ಎಚ್ಚರ..’ ಎಂಬ ಕಾರ್ಣಿಕ ಪ್ರತಿಧ್ವನಿಸಿತು.
ದಾವಣಗೆರೆಯ ಆನೆಕೊಂಡದಲ್ಲಿ ಸೋಮವಾರ ನಡೆದ ಐತಿಹಾಸಿಕ ಬಸವೇಶ್ವರ ಕಾರ್ಣಿಕೋತ್ಸವದಲ್ಲಿ ಸೇರಿದ್ದ ಸುತ್ತಲಿನ ಗ್ರಾಮಗಳ ಉತ್ಸವ ಮೂರ್ತಿ ಹಾಗೂ ಅಪಾರ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.