ADVERTISEMENT

ಟಿಸಿ ಆಯಿಲ್ ದುರ್ಬಳಕೆ: ಬೆಸ್ಕಾಂ ಸ್ಟೋರ್ ಕೀಪರ್ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:15 IST
Last Updated 17 ಸೆಪ್ಟೆಂಬರ್ 2025, 6:15 IST
ಹರಿಹರ: ಅರುಣ್ ಕುಮಾರ್ ಜಿ.ಎಂ.
ಹರಿಹರ: ಅರುಣ್ ಕುಮಾರ್ ಜಿ.ಎಂ.   

ಹರಿಹರ: ಪರಿವರ್ತಕ (ಟಿಸಿ) ಆಯಿಲ್ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ನಗರದ ಬೆಸ್ಕಾಂ ವಿಭಾಗೀಯ ಕಚೇರಿಯ ವಿಭಾಗೀಯ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ (ಅಸಿಸ್ಟೆಂಟ್ ಸ್ಟೋರ್ ಕೀಪರ್) ಅರುಣ್ ಕುಮಾರ್ ಜಿ.ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬೆಸ್ಕಾಂನ ಲೆಕ್ಕಪತ್ರ ವಿಭಾಗದ ಅಧಿಕಾರಿಗಳು ಈ ಹಿಂದೆ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಉಗ್ರಾಣದಲ್ಲಿ ಭೌತಿಕ ಪರಿಮಾಣಕ್ಕೂ ಲೆಡ್ಜರ್ ಪರಿಮಾಣಕ್ಕೂ ₹ 56.67 ಲಕ್ಷ ಮೌಲ್ಯದ 89,270 ಲೀಟರ್‌ ಟಿಸಿ ಆಯಿಲ್ ವ್ಯತ್ಯಾಸವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಚಾರಣೆಯನ್ನು ಕಾಯ್ದಿರಿಸಿ ನೌಕರರ ಸೇವಾ ನಡತೆ ನಿಬಂಧನೆಗಳ ಅನ್ವಯ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಆರ್.ದಯಾನಂದ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.