ADVERTISEMENT

ದಾವಣಗೆರೆಗೆ ನೀರು ಪೂರೈಸುವ ಭದ್ರಾ ಚಾನೆಲ್‌ನ ತೊಟ್ಟಿಲು ನೀರುಪಾಲು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 9:05 IST
Last Updated 2 ಅಕ್ಟೋಬರ್ 2022, 9:05 IST
ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಸುವ ಭದ್ರಾ ಬಲದಂಡೆ ತೂಗು ತೊಟ್ಟಿಲು ನಲ್ಕುಂದ ಗ್ರಾಮದಲ್ಲಿ ಮುರಿದು ನಲ್ಕುಂದ–ಶ್ಯಾಗಲೇ ಹಳ್ಳಕ್ಕೆ ಬಿದ್ದಿದೆ. ಚಾನಲ್‌ನ ನೀರು ಹಳ್ಳಕ್ಕೆ ಹರಿಯುತ್ತಿದೆ.
ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಸುವ ಭದ್ರಾ ಬಲದಂಡೆ ತೂಗು ತೊಟ್ಟಿಲು ನಲ್ಕುಂದ ಗ್ರಾಮದಲ್ಲಿ ಮುರಿದು ನಲ್ಕುಂದ–ಶ್ಯಾಗಲೇ ಹಳ್ಳಕ್ಕೆ ಬಿದ್ದಿದೆ. ಚಾನಲ್‌ನ ನೀರು ಹಳ್ಳಕ್ಕೆ ಹರಿಯುತ್ತಿದೆ.   

ದಾವಣಗೆರೆ: ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಸುವ ಭದ್ರಾ ಬಲದಂಡೆ ತೂಗು ತೊಟ್ಟಿಲು ನಲ್ಕುಂದ ಗ್ರಾಮದಲ್ಲಿ ಮುರಿದು ನಲ್ಕುಂದ–ಶ್ಯಾಗಲೇ ಹಳ್ಳಕ್ಕೆ ಬಿದ್ದಿದೆ. ಚಾನಲ್‌ನ ನೀರು ಹಳ್ಳಕ್ಕೆ ಹರಿಯುತ್ತಿದೆ.

ಬಾಡಾದಿಂದ ಸುಮಾರು 7 ಕಿಲೋಮೀಟರ್‌ ದೂರದ ನಲ್ಕುಂದದ ಮೂಲಕ ಹಾದು ಹೋಗುವ ಈ ತೊಟ್ಟಿಲು ಸೇತುವೆಯು ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ದುರ್ಬಲಗೊಂಡಿತ್ತು. ಭಾನುವಾರ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿ, ಬೆಳೆ ಹಾನಿ ಉಂಟಾಗಿಲ್ಲ.

ಈ ತೂಗು ತೊಟ್ಟಿಲನ್ನು ಕೂಡಲೇ ಸರಿಪಡಿಸದೇ ಇದ್ದರೆ ದಾವಣಗೆರೆ ನಗರಕ್ಕೆ ನೀರು ಪೂರೈಸಲು, ಆವರಗೊಳ್ಳ, ಕಕ್ಕರಗೊಳ್ಳ, ರಾಂಪುರ, ನಲ್ಕುಂದ, ಉಪನಾಯಕನಹಳ್ಳಿ ಸಹಿತ ಅನೇಕ ಹಳ್ಳಿಗಳ ರೈತರಿಗೆ ಭತ್ತ ಬೆಳೆಯುವ ಸಮಯಕ್ಕೆ ನೀರಿಲ್ಲದಂತಾಗಲಿದೆ ಎಂದು ಸ್ಥಳೀಯರಾದ ಪವನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಸುತ್ತಲಿನ ತೋಟ ಮತ್ತು ಜಮೀನಿನ ಮಣ್ಣು ಕೊರೆದು ಹಳ್ಳ ಪಾಲಾಗುತ್ತಿದೆ. ಅದಕ್ಕೂ ತಡೆಗೋಡೆ ನಿರ್ಮಿಸಿದರೆ ಸ್ಥಳೀಯ ರೈತರ ಜಮೀನು ಉಳಿಯಲಿದೆ ಎಂದು ತಿಳಿಸಿದ್ದಾರೆ.

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಈ ಸ್ಥಳಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.