ಮಲೇಬೆನ್ನೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಗ್ರಾಮಾಂತರ ಘಟಕದ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮುಖ್ಯವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ಭಕ್ತರು ಹಾಗೂ ಮಹಿಳೆಯರು ಅಪಪ್ರಚಾರ ನಡೆಸುವವರ ವಿರುದ್ಧ ಘೋಷಣೆ ಕೂಗಿದರು.
ಯೂಟ್ಯೂಬ್ ಮೂಲಕ ಸುಳ್ಳುಸುದ್ದಿ ಹರಡುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಡಕಚೇರಿಗೆ ಆಗಮಿಸಿದ ಪ್ರತಿಭಟನಕಾರರು, ಉಪತಹಶೀಲ್ದಾರ್ ಆರ್ .ರವಿ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಗಟ್ಟೆ ಲಿಂಗರಾಜ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಹನಗವಾಡಿ ವೀರೇಶ್, ಪುರಸಭೆ ಸದಸ್ಯ ಸಿದ್ದೇಶ್, ಬಿಜೆಪಿ ಮುಖಂಡ ಆನಂದಾಚಾರ್, ರೈತ ಮುಖಂಡ ಮುದೇಗೌಡರ ತಿಪ್ಪೇಶ್, ಪುಟ್ಟಪ್ಪ, ಎಸ್. ರಂಗಣ್ಣ, ಕೆ.ಜಿ. ಮಂಜುನಾಥ್, ನಿರಂಜನ್, ಸುನೀಲ್, ಆದಾಪುರ ವೀರೇಶ್, ಐರಣಿ ಮಹೇಶ್ ಹಾಗೂ ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.