ADVERTISEMENT

ಜಿಲ್ಲೆಯಲ್ಲಿ 3 ಮಂದಿಯಲ್ಲಿ ಪತ್ತೆಯಾದ ಕಪ್ಪು ಶಿಲೀಂಧ್ರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 5:29 IST
Last Updated 16 ಜೂನ್ 2021, 5:29 IST
ಕಪ್ಪು ಶಿಲೀಂಧ್ರ
ಕಪ್ಪು ಶಿಲೀಂಧ್ರ   

ದಾವಣಗೆರೆ: ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ಮೂರು ಮಂದಿಗೆ ಕಪ್ಪು ಶಿಲೀಂಧ್ರ ಇರುವುದು ಮಂಗಳವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 82 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದ್ದು, ಅದರಲ್ಲಿ 37 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 51 ಪ್ರಕರಣ ದೃಢಪಟ್ಟಿದ್ದು, 23 ಮಂದಿ ಗುಣಮುಖರಾಗಿದ್ದಾ‌ರೆ. ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ 28 ಮಂದಿಯಲ್ಲಿ ಶಿಲೀಂಧ್ರ ಕಾಣಿಸಿಕೊಂಡಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಬಿಡುಗಡೆಗೊಂಡಿದ್ದಾರೆ. ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಕೊರೊನಾದಿಂದ ಏಳು ಮಂದಿ ಸಾವು:ಕೊರೊನಾದಿಂದ ಏಳು ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ.

ADVERTISEMENT

ದಾವಣಗೆರೆ ಮುದ್ದಬೋವಿ ಕಾಲೊನಿಯ 65 ವರ್ಷದ ವೃದ್ಧ, ಎಂಸಿಸಿ ಎ. ಬ್ಲಾಕ್‌ನ 72 ವರ್ಷದ ವೃದ್ಧೆ, ಹೊನ್ನಾಳಿ ತಾಲ್ಲೂಕಿನ ಅರೆಹಳ್ಳಿಯ 33 ವರ್ಷದ ಯುವಕ, ಟಿ.ಜಿ. ಹಳ್ಳಿಯ 42 ವರ್ಷದ ಪುರುಷ, ತಕನಹಳ್ಳಿಯ 22 ವರ್ಷದ ಯುವಕ ಚನ್ನಗಿರಿ ತಾಲ್ಲೂಕು ನಲ್ಲೂರಿನ 27 ವರ್ಷದ ಯುವಕ, ಚನ್ನಗಿರಿ ಬೀರಲಿಂಗೇಶ್ವರ ಬಡಾವಣೆಯ 27 ವರ್ಷದ ಯುವತಿ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 69, ಹರಿಹರ ತಾಲ್ಲೂಕಿನಲ್ಲಿ 24, ಚನ್ನಗಿರಿ ತಾಲ್ಲೂಕಿನಲ್ಲಿ 30, ಹೊನ್ನಾಳಿ ತಾಲ್ಲೂಕಿನ 38, ಜಗಳೂರು ತಾಲ್ಲೂಕಿನಲ್ಲಿ 5 ಮಂದಿಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 15 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.