
ನ್ಯಾಮತಿ: ‘ಮನುಷ್ಯರಾಗಿ ಹುಟ್ಟಿದ ನಂತರ ಸಮಾಜಕ್ಕೆ ಉಪಯುಕ್ತ ಕೆಲಸಗಳನ್ನು ಮಾಡಬೇಕು. ಮರಣ ನಂತರ ನಮ್ಮ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಬೇಕು’ ಎಂದು ವಿಶ್ವಮಾನವ ಟ್ರಸ್ಟ್‌ನ ರುದ್ರಮುನಿ ಅವರಗೆರೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಮಾಸಿಕ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೀವನದಲ್ಲಿ ಮುಖ್ಯವಾಗಿ ಸಮಾಜದಲ್ಲಿ ಸಾಧನೆ ಮಾಡಿರುವವರನ್ನು ಸ್ಮರಿಸಿ ನಾವು ಅವರ ಸಾಧನೆ ಕಡೆ ಗಮನಹರಿಸಬೇಕು. ಗೌತಮ ಬುದ್ಧ, ಮಹಾವೀರ, ಬಸವಣ್ಣ, ಅಕ್ಕಮಹಾದೇವಿಯವರು ಸ್ವಾರ್ಥವನ್ನು ಬಿಟ್ಟು ಸಮಾಜಕ್ಕೆ ಶಾಂತಿಯ ಸಂದೇಶ ಸಾರಿದರು’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಈ. ಸುಮಲತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನ್ಯಾಮತಿ ಮೂಲದವರಾಗಿದ್ದು ಐದು ದಶಕಗಳಿಂದ ಪ್ರಸ್ತುತ ಬೆಳಗಾವಿಯಲ್ಲಿ ವಾಸವಿರುವ ಕುಂಬಾರ ಗುರುಸಿದ್ದಪ್ಪ ಕುಟುಂಬದವರನ್ನು ಸನ್ಮಾನಿಸಲಾಯಿತು.
ಆಧ್ಯಾತ್ಮಿಕ– ಸಾಂಸ್ಕೃತಿಕ ರಾಯಭಾರಿ ಎಸ್.ಸೌಭಾಗ್ಯ, ಚುಟುಕು ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಕವಿರಾಜ, ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಶಿವಯೋಗಿ, ಕಲಾವಿದ ರೇವಣಸಿದ್ದಪ್ಪ, ಪಿಡಿಒ ಜಯಪ್ಪ, ಸೊಂಡೂರು ಮಹೇಶ್ವರಪ್ಪ, ಬಿ.ಜಿ.ಚೈತ್ರಾ, ಉಷಾ, ಎಂ.ಎಸ್.ಜಗದೀಶ, ಸಿ.ಕೆ.ಬೋಜರಾಜ, ನಾಗರಾಜ, ಅಂಗನವಾಡಿ ಕಾರ್ಯಕರ್ತೆ ಉಷಾ, ಜಿ.ಎಂ.ಮಂಜುಳಾ, ಆರ್. ಲಲಿತಾ, ಬಿದರಕಟ್ಟೆ ಸತೀಶ, ವನಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.