ADVERTISEMENT

ಬಸವಾಪಟ್ಟಣ: ಏಳು ದಿನಗಳಲ್ಲಿ ಜಾತಿ ಸಮೀಕ್ಷೆ ಪೂರೈಸಿದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:05 IST
Last Updated 30 ಸೆಪ್ಟೆಂಬರ್ 2025, 5:05 IST
ಬಸವಾಪಟ್ಟಣ ಸಮೀಪದ ಚಿರಡೋಣಿ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಆರ್.ಸತೀಶ್ ಏಳು ದಿನಗಳಲ್ಲಿ ಜಾತಿ ಸಮೀಕ್ಷೆ ಪೂರೈಸಿ ಜಿಲ್ಲೆಗೆ ಪ್ರಪ್ರಥಮರಾಗಿದ್ದು, ಸೋಮವಾರ ಇಲ್ಲಿನ ನಾಡಕಛೇರಿಯಲ್ಲಿ ಉಪ ತಹಶೀಲ್ದಾರ್ ನೀಲಮ್ಮ ಸತೀಶ್ ಅವರನ್ನು ಅಭಿನಂದಿಸಿದರು.
ಬಸವಾಪಟ್ಟಣ ಸಮೀಪದ ಚಿರಡೋಣಿ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಆರ್.ಸತೀಶ್ ಏಳು ದಿನಗಳಲ್ಲಿ ಜಾತಿ ಸಮೀಕ್ಷೆ ಪೂರೈಸಿ ಜಿಲ್ಲೆಗೆ ಪ್ರಪ್ರಥಮರಾಗಿದ್ದು, ಸೋಮವಾರ ಇಲ್ಲಿನ ನಾಡಕಛೇರಿಯಲ್ಲಿ ಉಪ ತಹಶೀಲ್ದಾರ್ ನೀಲಮ್ಮ ಸತೀಶ್ ಅವರನ್ನು ಅಭಿನಂದಿಸಿದರು.   

ಬಸವಾಪಟ್ಟಣ: ಸಮೀಪದ ಚಿರಡೋಣಿಯ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್‌.ಆರ್‌.ಸತೀಶ್‌ ಅವರು ತಮಗೆ ವಹಿಸಿದ್ದ 135 ಮನೆಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಏಳು ದಿನಗಳಲ್ಲಿ ಸಂಪೂರ್ಣಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

‘ಸಮೀಕ್ಷೆಯ ಆರಂಭದಲ್ಲಿ ನೆಟ್‌ವರ್ಕ್‌, ಲಾಗಿನ್‌, ರೂಟ್‌ಮ್ಯಾಪ್‌ ಸಮಸ್ಯೆ ಕಾಡಿದರೂ ಮುಂಜಾನೆ 6ರಿಂದ ರಾತ್ರಿ 10 ಗಂಟೆವರೆಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಮನೆಗಳಿಗೆ ನೀಡಲಾಗಿದ್ದ ಯುಎಚ್‌ಐಡಿ ನಂಬರ್‌ಗಳನ್ನು ಗ್ರಾಮಸ್ಥರ ಸಹಾಯದಿಂದ ಪತ್ತೆ ಮಾಡಿ, ಮನೆಯ ಮುಖ್ಯಸ್ಥರಿಗೆ ಅಂದಾಜು 40 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡು ಅಪ್‌ಲೋಡ್‌ ಮಾಡಿದೆ’ ಎಂದು ಶಿಕ್ಷಕ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನ ಎಲ್ಲ ಶಿಕ್ಷಕರಿಗೆ 100ರಿಂದ 135 ಮನೆಗಳ ಸಮೀಕ್ಷೆ ಜವಾಬ್ದಾರಿ ನೀಡಲಾಗಿದೆ. ಮೊದಲ ದಿನದಿಂದಲೇ ಕಾರ್ಯೋನ್ಮುಖರಾದ ಶಿಕ್ಷಕ ಸತೀಶ್‌ ಅವರ ಕಾಯಕ ಇತರರಿಗೆ ಮಾದರಿಯಾಗಿದೆ’ ಎಂದು ಉಪತಹಶೀಲ್ದಾರ್‌ ನೀಲಮ್ಮ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.