ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿ ಗ್ರಾಮದ ಸುತ್ತಮುತ್ತ ಬುಧವಾರ ರಾತ್ರಿ ರಭಸವಾಗಿ ಬೀಸಿದ ಗಾಳಿಯಿಂದಾಗಿ ನಲ್ಲೂರು-ಮಾವಿನಕಟ್ಟೆ ರಸ್ತೆಯಲ್ಲಿನ ಮರಗಳ ರೆಂಬೆ, ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿವೆ.
ಹಿರೇಮಳಲಿ, ಭೈರನಹಳ್ಳಿ, ಗಾಳಿಹಳ್ಳಿ, ಜಯಂತಿ ನಗರ, ಮೇಳನಾಯಕನಕಟ್ಟೆ, ಬಿಆರ್‌ಟಿ ಕಾಲೊನಿ, ಚನ್ನೇಶಪುರ ಮುಂತಾದ ಗ್ರಾಮಗಳಲ್ಲಿ ಮೊದಲ ಮಳೆಯ ಸಿಂಚನವಾಗಿದೆ.
ರೆಂಬೆ, ಕೊಂಬೆಗಳು ಮುರಿದು ಬಿದ್ದಿದ್ದರಿಂದ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.