ADVERTISEMENT

ಪಾಲಿಕೆಯಿಂದ ರಸ್ತೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 7:43 IST
Last Updated 4 ಫೆಬ್ರುವರಿ 2021, 7:43 IST
ದಾವಣಗೆರೆಯ ಜಯನಗರ ‘ಬಿ’ ಬ್ಲಾಕ್‌ನ ಭಗೀರಥ ಸರ್ಕಲ್ ಬಳಿ ಮನೆಗಳ ಎದುರು ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿದ್ದ ಕಾಂಪೌಂಡ್‌ಗಳನ್ನು ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಯಿತು.
ದಾವಣಗೆರೆಯ ಜಯನಗರ ‘ಬಿ’ ಬ್ಲಾಕ್‌ನ ಭಗೀರಥ ಸರ್ಕಲ್ ಬಳಿ ಮನೆಗಳ ಎದುರು ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿದ್ದ ಕಾಂಪೌಂಡ್‌ಗಳನ್ನು ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಯಿತು.   

ದಾವಣಗೆರೆ:ನಗರದ ಜಯನಗರ ‘ಬಿ’ ಬ್ಲಾಕ್‌ನ ಭಗೀರಥ ಸರ್ಕಲ್ ಬಳಿ 15ಕ್ಕೂ ಹೆಚ್ಚು ಮನೆಗಳಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿದ್ದ ಕಾಂಪೌಂಡ್‌ಗಳನ್ನು ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಯಿತು.

ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಒಳಗೆ ಬೆಳೆಸಿದ್ದ ಗಿಡಗಳನ್ನು ಪಾಲಿಕೆಯ ಎಂಜಿನಿಯರ್ ಹಾಗೂ ಆರೋಗ್ಯ ಶಾಖೆಗಳ ಜಂಟಿ ಸಹಯೋಗದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಿ, ಕೆಲವರಿಗೆ ಎಚ್ಚರಿಕೆ ನೀಡಲಾಯಿತು.

‘ಜಯನಗರದಲ್ಲಿ 40ಕ್ಕೂ ಹೆಚ್ಚು ಮನೆಗಳವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದರು. ಅವುಗಳಲ್ಲಿ ಒಂದು ಕ್ರಾಸ್‌ನಲ್ಲಿ ಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಉಳಿದ ವುಗಳನ್ನು ಪಾಲಿಕೆ ಆಯುಕ್ತರ ನಿರ್ದೇಶನದಂತೆ ಹಂತಹಂತವಾಗಿ ತೆರವುಗೊಳಿಸಲಾಗುವುದು’ ಎಂದು ಸಹಾಯಕ ಎಂಜಿನಿಯರ್ ಕೆ.ಎಂ. ಚೇತನ್ ತಿಳಿಸಿದರು.

ADVERTISEMENT

ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕ ರಾಮಪ್ಪ ಹಾಗೂ ಕಾಮಗಾರಿ ನಿರೀಕ್ಷಕ ಪ್ರಭಾಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.