ADVERTISEMENT

ಕುಸಿದ ರಸ್ತೆ; ಸಂಚಾರ ಸಂಕಟ

ಹಾಳಾದ ತ್ಯಾವಣಿಗೆ-– ಬೆಳಲಗೆರೆ ಸಂಪರ್ಕ ರಸ್ತೆಗಳು; ಹಲವರಿಗೆ ಗಾಯ

ಸಂತೋಷ್ ಎನ್.ಜೆ.
Published 20 ಅಕ್ಟೋಬರ್ 2022, 5:19 IST
Last Updated 20 ಅಕ್ಟೋಬರ್ 2022, 5:19 IST
ತ್ಯಾವಣಿಗೆಯಿಂದ ಬೆಳಲಗೆರೆ ಸಂಪರ್ಕಿಸುವ ದೊಡ್ಡಹಳ್ಳ ಸೇತುವೆಯ ಗುಂಡಿಯಲ್ಲಿ ಟ್ರ್ಯಾಕ್ಟರ್ ಸಿಲುಕಿರುವುದು (ಎಡಚಿತ್ರ). ಬೆಳಲಗೆರೆ ರಸ್ತೆ ಕುಸಿದಿರುವುದು
ತ್ಯಾವಣಿಗೆಯಿಂದ ಬೆಳಲಗೆರೆ ಸಂಪರ್ಕಿಸುವ ದೊಡ್ಡಹಳ್ಳ ಸೇತುವೆಯ ಗುಂಡಿಯಲ್ಲಿ ಟ್ರ್ಯಾಕ್ಟರ್ ಸಿಲುಕಿರುವುದು (ಎಡಚಿತ್ರ). ಬೆಳಲಗೆರೆ ರಸ್ತೆ ಕುಸಿದಿರುವುದು   

ತ್ಯಾವಣಿಗೆ: ತ್ಯಾವಣಿಗೆ-ಬೆಳಲಗೆರೆ ಗ್ರಾಮದ ನಡುವಿನ ಹಲವು ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಈಚೆಗೆ ಸುರಿದ ಮಳೆಯಿಂದಾಗಿ ಹಲವೆಡೆಯ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದಿಂದ ಬೃಹತ್‌ ಗಾತ್ರದ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

ರಸ್ತೆ ಮೇಲೆಯೇ ಗುಂಡಿ ಬಿದ್ದಿರುವುದರಿಂದ ಹಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹಲವೆಡೆ ಸಾರ್ವಜನರಿಕರೇ ಎಚ್ಚರಿಕೆಯ ಫಲಕಗಳಂತೆ ಗಿಡಗಳನ್ನು ನೆಟ್ಟಿದ್ದಾರೆ.

ADVERTISEMENT

ಮಳೆ ಬಂದಾಗ ಸೇತುವೆ ಮೇಲೆ ನೀರು ಹರಿಯುವುದರಿಂದ ಗುಂಡಿಗಳು ವಾಹನ ಸವಾ‌ರರಿಗೆ ಕಾಣುವುದಿಲ್ಲ. ಇದರಿಂದ ಹಲವರು ಬಿದ್ದಿದ್ದಾರೆ. ಈಚೆಗೆ ದಂಪತಿಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸೂಚನಾ ಫಲಕ ಅಥವಾ ಬ್ಯಾರಿಕೇಡ್ ಹಾಕಿಲ್ಲ. ಇದರಿಂದ ಹಲವರು ಬಿದ್ದು ಗಾಯಗೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತ್ಯಾವಣಿಗೆ-ದೊಡ್ಡಘಟ್ಟದಿಂದ ಬಸವಾಪಟ್ಟಣಕ್ಕೆ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾದ್ದರಿಂದ ತ್ಯಾವಣಿಗೆ–ಬೆಳಲಗೆರೆ ರಸ್ತೆಯ ಮೂಲಕವೇ ಹೆಚ್ಚಿನ ವಾಹನ ಸವಾರರು ಸಂಚರಿಸುತ್ತಿದ್ದಾರೆ.

ಈಚೆಗೆಬೆಳಲಗೆರೆ ಗ್ರಾಮದ ರವಿ ರಾತ್ರಿ ವೇಳೆ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ನವಿಲೇಹಾಳ್ ಗ್ರಾಮದ ಇಬ್ಬರು ಯುವಕರು ಸೇತುವೆ ಮೇಲೆ ಬಿದ್ದಿದ್ದರು. ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ಹಳ್ಳದಲ್ಲಿ ಬಿದ್ದ ದ್ವಿಚಕ್ರವಾಹನವನ್ನು ಗ್ರಾಮಸ್ಥರು ಮೇಲಕ್ಕೆ ಎತ್ತಿದ್ದರು ಎಂದುಗ್ರಾಮದ ಭರತ್ ಬಿ.ಎಚ್. ತಿಳಿಸಿದರು.

ಒಂದು ತಿಂಗಳಿನಿಂದ ಇಂತಹ ಹಲವಾರು ಘಟನೆಗಳು ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ರಸ್ತೆ ಗುಂಡಿ ಮುಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ದುರಸ್ತಿಪಡಿಸಲಾಗುವುದು ಎಂದುಲೋಕೋಪಯೋಗಿ ಇಲಾಖೆ ಎಇಇರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.