ADVERTISEMENT

ಕೊರೊನಾ: 10 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:08 IST
Last Updated 19 ಜೂನ್ 2021, 4:08 IST

ದಾವಣಗೆರೆ:ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 10 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ದಾವಣಗೆರೆ ತಾಲ್ಲೂಕಿನ ಅಣಬೇರಿನ 56 ವರ್ಷದ ಮಹಿಳೆ, ಕೊಳೆನಹಳ್ಳಿಯ 38 ವರ್ಷದ ಪುರುಷ, ದೊಡ್ಡಬಾತಿಯ 62 ವರ್ಷದ ವೃದ್ಧ, ನೇರ್ಲಿಗೆಯ 47 ವರ್ಷದ ಮಹಿಳೆ,ಆಲೂರಿನ 60ರ ವೃದ್ಧ, ಆನಗೋಡನಹಳ್ಳಿಯ 60ರ ವೃದ್ಧೆ, ಗೋಪನಾಳ್‌ ಗ್ರಾಮದ 30ರ ಮಹಿಳೆ, ದಾವಣಗೆರೆಯ ಸರಸ್ವತಿ ನಗರದ 81 ವರ್ಷದ ವೃದ್ಧೆ, ಹೊನ್ನಾಳಿ ತಾಲ್ಲೂಕಿನ ರಾಂಪುರದ 58 ವರ್ಷದ ಪುರುಷ, ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರಿನ 60 ವರ್ಷದ ವೃದ್ಧೆ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 93, ಹರಿಹರ ತಾಲ್ಲೂಕಿನಲ್ಲಿ 13, ಚನ್ನಗಿರಿ ತಾಲ್ಲೂಕಿನಲ್ಲಿ 31, ಹೊನ್ನಾಳಿ ತಾಲ್ಲೂಕಿನ 20, ಜಗಳೂರು ತಾಲ್ಲೂಕಿನಲ್ಲಿ 9 ಮಂದಿಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 8 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.