ದಾವಣಗೆರೆ: ಜಿಲ್ಲೆಯಲ್ಲಿ 221 ಮಂದಿಗೆ ಕೊರೊನಾ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ.
26 ವೃದ್ಧರು, 25 ವೃದ್ಧೆಯರು, 5 ಬಾಲಕರು, 1 ವರ್ಷದ ಮಗು ಸೇರಿ 9 ಬಾಲಕಿಯರಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 90 ಮಂದಿಗೆ ವೈರಸ್ ತಗುಲಿದೆ. ಹದಡಿ, ಕೊಂಡಜ್ಜಿ, ಬೆಣ್ಣೆಹಳ್ಳಿ, ಬೆಳವನೂರು, ಜರೆಕಟ್ಟೆ, ಬಿ.ಚಿಟ್ನಹಳ್ಳಿ, ಅಣಜಿಮ ಎಲೆಬೇತೂರು, ಆವರಗೊಳ್ಳ, ಆನಗೋಡು ಹೀಗೆ 13 ಮಂದಿ ಗ್ರಾಮೀಣ ಪ್ರದೇಶದವರು. ಉಳಿದ 77 ಮಂದಿ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯವರಾಗಿದ್ದಾರೆ.
ಚಿಗಟೇರಿ ಆಸ್ಪತ್ರೆಯ 6 ಸಿಬ್ಬಂದಿಗೆ, ರಕ್ತನಿಧಿ ಕೇಂದ್ರದ ಒಬ್ಬ ಸಿಬ್ಬಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸರಸ್ವತಿ ನಗರ, ನಿಟುವಳ್ಳಿ, ಆಂಜನೇಯ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 43, ಹರಿಹರ ತಾಲ್ಲೂಕಿನಲ್ಲಿ 28, ಜಗಳೂರು ತಾಲ್ಲೂಕಿನಲ್ಲಿ 26, ಚನ್ನಗಿರಿ ತಾಲ್ಲೂಕಿನಲ್ಲಿ 17 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ರಾಣೆಬೆನ್ನೂರಿನ ನಾಲ್ವರು, ಶಿಕಾರಿಪುರದ ನಾಲ್ವರು, ಹೊಳಲ್ಕೆರೆ, ಹರಪನಹಳ್ಳಿಯ ತಲಾ ಇಬ್ಬರು, ಚಿತ್ರದುರ್ಗ, ಮೊಳಕಾಲ್ಮುರು, ಹಾಸನ, ಹಿರೆಕೆರೂರು, ಕೊಟ್ಟೂರಿನ ತಲಾ ಇಬ್ಬರು ಹೀಗೆ ಜಿಲ್ಲೆಯ ಹೊರಗಿನ 17 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.
207 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 91 ವರ್ಷದವರು ಸೇರಿ 30 ವೃದ್ಧರು, 27 ವೃದ್ಧೆಯರು, ಒಂದು ವರ್ಷದ ಶಿಶು ಸೇರಿ ಮೂವರು ಬಾಲಕರು, ಒಂದು ವರ್ಷದ ಎರಡು ಶಿಶುಗಳು ಸೇರಿ ಏಳು ಬಾಲಕಿಯರು ಅದರಲ್ಲಿ ಒಳಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 11,198 ಮಂದಿಗೆ ಕೊರೊನಾ ವೈರಸ್ ಸೋಂಕು ಬಂದಿದೆ. 8,193 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 213 ಮಂದಿ ಮೃತಪಟ್ಟಿದ್ದಾರೆ. 2792 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.