ADVERTISEMENT

ಮಹಾರಾಷ್ಟ್ರದಿಂದ ಬಂದ ಮಹಿಳೆ ಸಹಿತ ಮೂವರಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 12:47 IST
Last Updated 10 ಜೂನ್ 2020, 12:47 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಮಹಾರಾಷ್ಟ್ರದಿಂದ ಬಂದ 25 ವರ್ಷದ ಮಹಿಳೆ (ಪಿ.6039) ಸಹಿತ ಮೂವರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

ಭಗತ್‌ಸಿಂಗ್‌ ನಗರದ ಈ ಮಹಿಳೆಗೆ ಸಣ್ಣ ಮಗು ಇರುವುದರಿಂದ ಹೊಸ ಮಾರ್ಗಸೂಚಿ ಪ್ರಕಾರ ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಬೇಕಿದೆ.

ಜಾಲಿನಗರದ 68 ವರ್ಷದ ಮಹಿಳೆಯ (ಪಿ.1485) ಸಂಪರ್ಕದಿಂದ 39 ವರ್ಷದ ವ್ಯಕ್ತಿಗೆ (ಪಿ.6040) ಸೋಂಕು ಬಂದಿದೆ. ಸಿಜಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಿ ಗ್ರೂಪ್‌ ನೌಕರಳಾಗಿರುವ ಮಹಿಳೆಯಲ್ಲೂ (ಪಿ.6041) ಸೋಂಕು ಕಾಣಿಸಿಕೊಂಡಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 214ಕ್ಕೇರಿದೆ. ಬುಧವಾರ ಗುಣಮುಖರಾಗಿ 8 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ 8 ಸೇರಿ ಒಟ್ಟು 165 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 43 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.