ADVERTISEMENT

ನಾಲ್ಕು ವರ್ಷದ ಬಾಲಕಿ ಸೇರಿ 21 ಮಂದಿಗೆ ಕೋವಿಡ್

444ಕ್ಕೆ ಏರಿದ ಸೋಂಕಿತರ ಸಂಖ್ಯೆ: ಜಿಲ್ಲೆಯಲ್ಲಿ 91 ಸಕ್ರಿಯ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 5:43 IST
Last Updated 11 ಜುಲೈ 2020, 5:43 IST
   

ದಾವಣಗೆರೆ: ನಾಲ್ಕು ವರ್ಷದ ಬಾಲಕಿ ಸೇರಿ 21 ಮಂದಿಗೆ ಶುಕ್ರವಾರ ಕೋವಿಡ್‌–19 ಇರುವುದು ದೃಢಪಟ್ಟಿದೆ. ಆದರೆ ನಗರದ 13 ಮಂದಿಗೆ ಸಂಪರ್ಕ ಪತ್ತೆಯಾಗಿಲ್ಲ.

ಕೆಎಸ್ಆರ್‌ಟಿಸಿಯ 49 ವರ್ಷದ ಡ್ರೈವರ್ ಕಂ ಕಂಡಕ್ಟರ್‌ಗೆ ಸೋಂಕು ತಗುಲಿದ್ದು, ಇವರು ತಮ್ಮ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಬಂದಿದ್ದರು ಎನ್ನಲಾಗಿದೆ. ವಿದ್ಯಾನಗರದ ‘ಸಿ‘ ಬ್ಲಾಕ್ 55 ವರ್ಷದ ಮಹಿಳೆ, ಅದೇ ಬಡಾವಣೆಯ ರಜತ್‌ನಿಲಯದ 31 ವರ್ಷದ ಮಹಿಳೆಗೆ ಕೊರೊನಾ ವೈರಸ್ ಪತ್ತೆಯಾಗಿದೆ.

ಹರಿಹರದ ಗಾಂಧೀನಗರ 2ನೇ ಮೇನ್, 2ನೇ ಕ್ರಾಸ್‌ನ 55 ವರ್ಷದ ಪುರುಷ, 48 ವರ್ಷದ ಮಹಿಳೆ, 25 ವರ್ಷದ ಮಹಿಳೆ ಹಾಗೂ ನಾಲ್ಕು ವರ್ಷದ ಬಾಲಕಿಗೆ ಹಾಗೂ ಹರಿಹರದ ಅಶೋಕ ಎಲೆಕ್ಟ್ರಾನಿಕ್ಸ್ ಬಳಿ 50 ವರ್ಷ ಹಾಗೂ 23 ವರ್ಷದ ಪುರುಷನಿಗೆ ಕೋವಿಡ್‌ ದೃಢಪಟ್ಟಿದೆ. ಇವರ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತದೆ.

ADVERTISEMENT

ದಾವಣಗೆರೆಯ ಸಿದ್ದೇಶ್ವರ ಬಡಾವಣೆಯ 30 ವರ್ಷದ ಮಹಿಳೆ, ಆರನೇಕಲ್ಲಿನ 27 ವರ್ಷದ ಮಹಿಳೆ, ದಾವಣಗೆರೆಯ 25 ವರ್ಷದ ಮಹಿಳೆ, ಜಾಲಿನಗರದ 2ನೇ ಮುಖ್ಯರಸ್ತೆ ಮೊದಲನೇ ಅಡ್ಡರಸ್ತೆಯ 33 ವರ್ಷದ ಪುರುಷನಿಗೆ ಶೀತಜ್ವರ ಇದ್ದಿ
ದ್ದರಿಂದ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಕೋವಿಡ್ ದೃಢಪಟ್ಟಿದೆ.

ರಾಣೆಬೆನ್ನೂರಿನ ಹಲಗೇರಿ ರಸ್ತೆಯ 53 ವರ್ಷದ ಪುರುಷನಿಗೆ, ಉಸಿರಾಟದ ಸಮಸ್ಯೆ, ಕೆಟಿಜೆ ನಗರದ 3ನೇ ಮೇನ್ 9ನೇ ಕ್ರಾಸ್‌ನ 35 ವರ್ಷದ ಮಹಿಳೆ ಹಾಗೂ ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆ 46 ವರ್ಷದ ಪುರುಷ ಹಾಗೂ ಶಾಮನೂರಿನ ನಾಗನೂರು ರಸ್ತೆಯ 48 ವರ್ಷದ ಪುರುಷನಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್‌–19 ದೃಢಪಟ್ಟಿದೆ.

ಭಾಷಾನಗರದ ರಿಂಗ್ ರಸ್ತೆಯ 42 ವರ್ಷದ ಪುರುಷ, ಮಿಲ್ಲತ್ ಕಾಲೊನಿಯ 33 ವರ್ಷ ಹಾಗೂ 34 ವರ್ಷದ ಇಬ್ಬರು ಪುರುಷರಿಗೆ ಕೊರೊನಾ ತಗುಲಿದೆ.

11 ಮಂದಿ ಬಿಡುಗಡೆ: ಶುಕ್ರವಾರ 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಎಂಸಿಸಿಎ ಬ್ಲಾಕ್‌ನ 32 ವರ್ಷದ ಪುರುಷ, ದಾವಣಗೆರೆ ಚೌಕಿಪೇಟೆಯ 35 ವರ್ಷದ ಪುರುಷ, ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ 63 ವರ್ಷದ ಪುರುಷ, 27 ವರ್ಷದ ಪುರುಷ, ಶಿವಕುಮಾರ ಬಡಾವಣೆಯ 22 ವರ್ಷದ ಪುರುಷ, ಎಂಸಿಸಿ ‘ಎ’ ಬ್ಲಾಕ್‌ 5ನೇ ಮೇನ್‌ನ 73 ವರ್ಷದ ವೃದ್ಧ, 63 ವರ್ಷದ ವೃದ್ಧೆ ಬಿಡುಗಡೆ ಹೊಂದಿದ್ದಾರೆ.

ಹರಿಹರ ಎಪಿಎಂಸಿಯ ಗೌಸಿಯಾ ಕಾಲೊನಿಯ 30 ವರ್ಷದ ಪುರುಷ, ದಾವಣಗೆರೆಯ ಚೌಕಿಪೇಟೆಯ 46 ವರ್ಷದ ಪುರುಷ, ನಿಟುವಳ್ಳಿಯ ಬಡಾವಣೆ ಎಚ್.ಕೆ.ಆರ್ ಸರ್ಕಲ್‌ನ 43 ವರ್ಷದ ಪುರುಷ, ಚನ್ನಗಿರಿಯ ನಲ್ಲೂರಿನ 62ನೇ ವರ್ಷದ ವೃದ್ಧೆ ಕೋವಿಡ್ ಗೆದ್ದಿದ್ದಾರೆ.

ಸೋಂಕಿತರ ಸಂಖ್ಯೆ ಒಟ್ಟು 444ಕ್ಕೆ ಏರಿದ್ದು, 91 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.