ADVERTISEMENT

ಕಸ್ಟೋಡಿಯಲ್ ಡೆತ್: ತಿಂಗಳೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:30 IST
Last Updated 8 ನವೆಂಬರ್ 2020, 3:30 IST

ದಾವಣಗೆರೆ: ಮಾಯಕೊಂಡ ಠಾಣೆಯಲ್ಲಿ ನಡೆದ ಕಸ್ಟೋಡಿಯಲ್ ಡೆತ್ ಪ್ರಕರಣ ಸಂಬಂಧ ಸಿಐಡಿ ಮೃತನ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದೆ. ಇದಾದ ಬಳಿಕ ಇದೇ ತಿಂಗಳೊಳಗೆ ನ್ಯಾಯಾಲಯಕ್ಕೆ ಸಿಐಡಿ ಆರೋಪಪಟ್ಟಿ ಸಲ್ಲಿಸಲಿದೆ ಎಂದು ಸಿಐಡಿಯ ಮೂಲಗಳು ತಿಳಿಸಿವೆ.

ಅಕ್ಟೋಬರ್ 6ರಂದು ನಡೆದಿದ್ದ ಘಟನೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಈ ತಂಡ ಘಟನೆ ನಡೆದ ಮಾಯಕೊಂಡ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಮೃತ ಮರುಳಸಿದ್ದಪ್ಪ ಅವರ ಪತ್ನಿ ಮತ್ತು ಸಂಬಂಧಿಕರ ಸಮಗ್ರ ಹೇಳಿಕೆ ಪಡೆದು ವರದಿ
ಸಿದ್ಧಪಡಿಸಿತ್ತು.

ಮೃತನ ಎರಡನೇ ಪತ್ನಿ ಹಾಗೂ ಆಕೆಯ ಸಂಬಂಧಿಕರಿಂದ ಹೇಳಿಕೆ ಪಡೆದಿದ್ದು, ಪ್ರಕರಣ ಸಂಬಂಧ ಎಲ್ಲರ ವಿಚಾರಣೆ ಮುಗಿಸಿದೆ. ಅಲ್ಲದೇ ಸಿ.ಸಿ.ಟಿ.ವಿ. ಕ್ಯಾಮೆರಾದ ತುಣುಕುಗಳನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷಾ ವರದಿ ಶೀಘ್ರವೇ ಸಿಐಡಿ ಕೈಸೇರಲಿದೆ. ಈ ಮಾಹಿತಿ ಆಧರಿಸಿ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.