
ದಾವಣಗೆರೆ: ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 3 ದಿನ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬುಧವಾರ ತೆರೆ ಬಿದ್ದಿದ್ದು, ‘ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ತಂಡವು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಬಡಾವಣೆ ಠಾಣೆಯ ಪಿಸಿ ಧ್ರುವ ಅವರು ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಬಸವನಗರ ಠಾಣೆಯ ಪಿಸಿ ಮಾಲತಿಬಾಯಿ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಪಡೆದರು. ವಿದ್ಯಾನಗರ ಠಾಣೆಯು ‘ಬೆಸ್ಟ್ ಡಿಟೆಕ್ಟಿವ್ ಪೊಲೀಸ್ ಸ್ಟೇಷನ್’ ಪ್ರಶಸ್ತಿಗೆ ಭಾಜನವಾಗಿದೆ.
ಪುರುಷರ ವಿಭಾಗ:
ಕಬಡ್ಡಿ– ಜಿಲ್ಲಾ ಪೊಲೀಸ್ ಕಚೇರಿ (ಡಿಪಿಒ), ಹಗ್ಗಜಗ್ಗಾಟ ಹಾಗೂ ವಾಲಿಬಾಲ್– ಡಿಎಆರ್, ಕ್ರಿಕೆಟ್ – ಚನ್ನಗಿರಿ ಉಪವಿಭಾಗ, 4*100 ರಿಲೇ – ನಗರ ಉಪ ವಿಭಾಗ, ಅಫಿಷಿಯಲ್ ಕಪ್– ಪ್ರೆಸ್‌ಕ್ಲಬ್ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿವು.
ಮಹಿಳೆಯರ ವಿಭಾಗ:
4*100 ರಿಲೇ – ಶಹೀನಾಬಾನು, ಹಗ್ಗಜಗ್ಗಾಟ– ಲಕ್ಷ್ಮಿದೇವಿ ಮತ್ತು ತಂಡ, ಥ್ರೋಬಾಲ್– ಮಾಳಮ್ಮ ಮತ್ತು ತಂಡ ಗೆದ್ದು ಬೀಗಿದವು.
ಎಸ್‌ಪಿ, ಎಎಸ್‌ಪಿ ವಿಭಾಗ:
ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಹಾಗೂ ಭರ್ಚಿ ಎಸೆತದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಪ್ರಥಮ ಸ್ಥಾನ ಪಡೆದರು. ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಹಾಗೂ ಗುಂಡು ಎಸೆತದಲ್ಲಿ ಎಎಸ್‌ಪಿ ಪರಮೇಶ್ವರ ಹೆಗಡೆ, 9 ಎಂ.ಎಂ. ಪಿಸ್ತೂಲ್ ಫೈರಿಂಗ್ ಹಾಗೂ 7.62 ಎಂ.ಎಂ ರೈಫಲ್ ಫೈರಿಂಗ್‌ನಲ್ಲಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು.
ಡಿವೈಎಸ್‌ಪಿ ವಿಭಾಗ:
100 ಮೀ. ಓಟದಲ್ಲಿ ಡಿಎಆರ್‌ನ ಪ್ರಕಾಶ ಪಿ.ಬಿ., ಷಟಲ್ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ನಗರ ಉಪವಿಭಾಗದ ಶರಣಬಸವೇಶ್ವರ ಹಾಗೂ ಎಡಿಪಿ ಮಂಜುನಾಥ್ ಪ್ರಥಮ ಸ್ಥಾನ ಪಡೆದರು. ಮಂಜುನಾಥ್ ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲೂ ಪ್ರಥಮ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ಎಫ್‌ಪಿಯುನ (ಬೆರಳಚ್ಚು) ರುದ್ರೇಶ್, ಚಕ್ರ ಎಸೆತದಲ್ಲಿ ಗ್ರಾಮಾಂತರ ಉಪವಿಭಾಗದ ಬಸವರಾಜ ಬಿ.ಎಸ್. ಪ್ರಥಮ ಸ್ಥಾನ ಗಳಿಸಿದರು. 9 ಎಂ.ಎಂ ಪಿಸ್ತೂಲ್ ಫೈರಿಂಗ್ ಹಾಗೂ 7.62 ಎಂ.ಎಂ ರೈಫಲ್ ಫೈರಿಂಗ್‌ನಲ್ಲಿ ವಲಯ ಕಚೇರಿಯ ರುದ್ರಪ್ಪ ಉಜ್ಜಿನಕೊಪ್ಪ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಗೆ ಮುತ್ತಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.