ADVERTISEMENT

ದಾವಣಗೆರೆ: ಪೊಲೀಸ್‌, ತಾಯಿ, ಮಗು ಸೇರಿ ಏಳು ಮಂದಿಗೆ ಕೊರೊನಾ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:09 IST
Last Updated 2 ಜೂನ್ 2020, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ತಾಯಿ, ಮಗು, ಬಡಾವಣೆ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಸೇರಿ ಏಳು ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.

ಎಸ್‌ಎಸ್‌ ಲೇಔಟ್‌ನ 35 ವರ್ಷದ ಪುರುಷ (ಪಿ.3635) ಅವರಿಗೆ ಆನೆಕೊಂಡದ 42 ವರ್ಷದ ವ್ಯಕ್ತಿಯಿಂದ ಸೋಂಕು ಬಂದಿದೆ. ಮಹಾರಾಷ್ಟ್ರದಿಂದ ಬಂದಿರುವ 32 ವರ್ಷದ ಯುವಕನಲ್ಲಿ (ಪಿ.3636) ವೈರಸ್ ಕಾಣಿಸಿಕೊಂಡಿದೆ.

ಬಡಾವಣೆ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿರುವ 40 ವರ್ಷದ ವ್ಯಕ್ತಿಯಲ್ಲಿ (ಪಿ. 3637) ಸೋಂಕು ಪತ್ತೆಯಾಗಿದೆ. ಅವರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದರು.

ADVERTISEMENT

ಜಾಲಿನಗರದ ಸುರೇಶ್‌ನಗರದ 30 ವರ್ಷದ ಮಹಿಳೆಗೆ (ಪಿ. 3640) ಜಾಲಿನಗರದ 45 ವರ್ಷದ ಮಹಿಳೆಯಿಂದ (ಪಿ.2819) ಸೋಂಕು ತಗಲಿದೆ. ಅಲ್ಲದೇ ಇವರ ಎರಡೂವರೆ ತಿಂಗಳಿನ ಹೆಣ್ಣುಮಗುವಿಗೂ (ಪಿ.3638) ಸೋಂಕು ತಗುಲಿದೆ.

ಬಸವರಾಜಪೇಟೆಯ 68 ವರ್ಷದ ವೃದ್ಧೆಯಿಂದ(ಪಿ.2560) 14 ವರ್ಷದ ಬಾಲಕಿಗೆ (ಪಿ.3639) ಸೋಂಕು ಬಂದಿದೆ. ಬೇತೂರು ರಸ್ತೆಯ 65 ವರ್ಷದ ವೃದ್ಧೆಗೆ (ಪಿ.3657) 38 ವರ್ಷದ ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ (ಪಿ.623) ಬಂದಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 163ಕ್ಕೇರಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದು, 121 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 38 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.