ADVERTISEMENT

ಪಿಯುಸಿ ಫಲಿತಾಂಶ: ದಾವಣಗೆರೆ ಜಿಲ್ಲೆಗೆ ಶೇ 64.09 ಫಲಿತಾಂಶ 

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 12:29 IST
Last Updated 14 ಜುಲೈ 2020, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಬರೆದವರಲ್ಲಿ ಶೇ 64.09 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷಕ್ಕಿಂತ ಉತ್ತಮ ಸಾಧನೆಯಾಗಿದೆ.

ಪರೀಕ್ಷೆ ಬರೆದ 16,219 ವಿದ್ಯಾರ್ಥಿಗಳಲ್ಲಿ 10,395 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಕಳಪೆ ಫಲಿತಾಂಶ ಬಂದಿದ್ದರೆ, ವಿಜ್ಞಾನ ವಿಭಾಗ ಉತ್ತಮ ಸಾಧನೆ ತೋರಿದೆ.

ಕಲಾ ವಿಭಾಗದಲ್ಲಿ 4,104 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,433 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಶೇ 34.92 ಮಾತ್ರ ಇದೆ.

ADVERTISEMENT

ವಾಣಿಜ್ಯ ವಿಭಾಗದಲ್ಲಿ 4,589 ವಿದ್ಯಾರ್ಥಿಗಳಲ್ಲಿ 2,729 ಮಂದಿ ಉತ್ತೀರ್ಣರಾಗಿದ್ದು, ಶೇ 59.47 ಫಲಿತಾಂಶ ಪ್ರಕಟವಾಗಿದೆ.

ವಿಜ್ಞಾನ ವಿಭಾಗದಲ್ಲಿ 7,526 ವಿದ್ಯಾರ್ಥಿಗಳಲ್ಲಿ 6,233 ಮಂದಿ ಉತ್ತೀರ್ಣರಾಗಿದ್ದು, ಶೇ 82.82 ಫಲಿತಾಂಶ ಬಂದಿದೆ.

ಕಳೆದ ಸಾಲಿನಲ್ಲಿ ಶೇ 62.53 ಫಲಿತಾಂಶ ಬಂದಿತ್ತು. ಜಿಲ್ಲೆ 22ನೇ ಸ್ಥಾನದಲ್ಲಿತ್ತು. ಈ ಬಾರಿ 19ನೇ ಸ್ಥಾನಕ್ಕೆ ಏರಿದೆ ಎಂದು ಡಿಡಿಪಿಯು ನಾಗರಾಜಪ್ಪ ಆರ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.