ADVERTISEMENT

ಮಾ. 4, 5ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯುಗಧರ್ಮ ರಾಮಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 3:49 IST
Last Updated 31 ಜನವರಿ 2023, 3:49 IST
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪರದ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು.
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪರದ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು.   

ಬಸವಾಪಟ್ಟಣ: ಸಮೀಪದ ಹರನಹಳ್ಳಿ ಕೆಂಗಾಪರದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಮಾರ್ಚ್‌ 4 ಮತ್ತು 5ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಾನಪದ ಕವಿ ಯುಗಧರ್ಮ ರಾಮಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿವಿಧ ಗೋಷ್ಠಿಗಳು, ನಾಡು, ನುಡಿ, ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

‘ಊಟ, ಉಪಾಹಾರ, ಶಾಮಿಯಾನ ವ್ಯವಸ್ಥೆ, ಅತಿಥಿಗಳ ಸ್ವಾಗತ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು. ಸಭೆಗೆ ಆಗಮಿಸಿದ್ದ ಜನಪ್ರತಿನಿಧಿಗಳು, ಗಣ್ಯರು ಸಮ್ಮೇಳನದ ಸಂಪೂರ್ಣ ಯಶಸ್ಸಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್‌, ರಾಷ್ಟ್ರೀಯ ಗೋ ಸಂಸರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಟಿ. ಸಿದ್ಧಪ್ಪ, ಬಿಜೆಪಿಮುಖಂಡ ಅನಿಲ್‌ನಾಯ್ಕ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾನಿಬಾಯಿ, ಸದಸ್ಯರಾದ ಎಸ್‌. ಅಣ್ಣೋಜಿರಾವ್‌, ಪರಶುರಾಮಪ್ಪ, ರಾಜಪ್ಪ, ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಾಘು ದೊಡ್ಡಮನಿ, ಕಣಿವೆಬಿಳಚಿ ಕೆಂಗಾಪುರದ ಮುಖಂಡರಾದ ಪಿ.ಮಂಜಪ್ಪ, ಬಾಬುರಾವ್‌, ಮಂಜುನಾಥಜಾಧವ್‌, ಕೆ.ಪಿ.ಓಂಕಾರನಾಯ್ಕ್‌, ಜಿಲ್ಲಾ ಕ.ಸಾ.ಪ. ಪದಾಧಿಕಾರಿಗಳಾದ ಬಿ.ದಿಳ್ಳೆಪ್ಪ, ರಾಘವೇಂದ್ರನಾಯರಿ, ಎ.ಆರ್‌. ಉಜ್ಜಿನಪ್ಪ, ಎಂ.ವಿ. ಚನ್ನಬಸಪ್ಪ, ರೇವಣಸಿದ್ಧಪ್ಪ, ಜಿಗಳಿ ಪ್ರಕಾಶ್‌, ಕೆ.ಎಸ್‌. ವೀರೇಶ್‌ಪ್ರಸಾದ್‌, ಸಾಹಿತಿ ಫೈಜ್ನಟ್ರಾಜ್‌, ಶಿಕ್ಷಕರಾದ ಎಚ್‌.ಆರ್‌.ಸತೀಶ್‌. ಎಚ್‌.ಆರ್‌.ಹಾಲೇಶ್‌ ಭಾಗವಹಿಸಿದ್ದರು. ತಾಲ್ಲೂಕು ಕ.ಸಾಪ.ಅಧ್ಯಕ್ಷ ಎಲ್‌.ಜಿ.ಮಧುಕುಮಾರ್‌ ಸ್ವಾಗತಿಸಿದರು. ಎಂ.ಬಿ.ರಾಜಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.