ADVERTISEMENT

ದಾವಣಗೆರೆ: ಕಾಲುವೆ ಹೂಳು ತೆಗೆಯಲು ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:49 IST
Last Updated 31 ಜನವರಿ 2026, 6:49 IST
ಕಡರನಾಯ್ಕನಹಳ್ಳಿ ಸಮೀಪದಲ್ಲಿ ರೈತರು ಕಾಲುವೆಯ ಹೂಳು ತೆಗೆಯುತ್ತಿರುವುದು
ಕಡರನಾಯ್ಕನಹಳ್ಳಿ ಸಮೀಪದಲ್ಲಿ ರೈತರು ಕಾಲುವೆಯ ಹೂಳು ತೆಗೆಯುತ್ತಿರುವುದು   

ಕಡರನಾಯ್ಕನಹಳ್ಳಿ: ಸಮೀಪದಲ್ಲಿ ಭದ್ರಾ ಕಾಲುವೆಯಿಂದ ಜಮೀನುಗಳಿಗೆ ಸಂಪರ್ಕಿಸುವ ಉಪಕಾಲುವೆಯ ಹೂಳು ತೆಗೆಯುವಲ್ಲಿ ರೈತರು ನಿರತರಾಗಿದ್ದಾರೆ. 

ಸಂಪರ್ಕಿತ ಕಾಲುವೆಗಳು ಹೂಳು ತುಂಬಿ ಮುಚ್ಚಿ ಹೋಗಿವೆ. ಭದ್ರಾ ಕಾಲುವೆಯಲ್ಲಿ ನೀರು ಬಿಡಲಾಗಿದೆ. 

ನಾಟಿ ಮಾಡಲು ಸಸಿಗಳು ಬೆಳೆದು ನಿಂತಿವೆ. ಭೂಮಿ ಹದ ಮಾಡಲು ನೀರು ಬೇಕು. ಹೂಳು ತುಂಬಿರುವುದರಿಂದ ನೀರು ಜಮೀನುಗಳಿಗೆ ಹರಿಯುತ್ತಿಲ್ಲ. ರೈತರೆಲ್ಲ ಸೇರಿ ನಾವೇ ಹಣ ಹೊಂದಿಸಿ ಕಾಲುವೆ ಹೂಳು ತೆಗೆಯುತಿದ್ದೇವೆ ಎಂದು ಸಿರಿಗೆರೆ ರಮೇಶ್ ತಿಳಿಸಿದರು.

ADVERTISEMENT

ವಿ.ರಾಮಣ್ಣ, ಸಿರಿಗೆರೆ ಸಂತೋಷ್ ಮತ್ತು ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.