ADVERTISEMENT

ದಾವಣಗೆರೆ: ₹2.29 ಲಕ್ಷ ಮೌಲ್ಯದ ಆಭರಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 5:07 IST
Last Updated 18 ಜುಲೈ 2023, 5:07 IST

ದಾವಣಗೆರೆ: ಕಳವು ಪ್ರಕರಣದಲ್ಲಿ ಇಲ್ಲಿನ ರೈಲ್ವೆ ಠಾಣೆ ಪೊಲೀಸರು ಸೋಮವಾರ ಆರೋಪಿಯೊಬ್ಬನನ್ನು ಬಂಧಿಸಿ ₹2.29 ಲಕ್ಷ ಮೌಲ್ಯದ 41 ಗ್ರಾಂ ಬಂಗಾರದ ಆಭರಣ ಹಾಗೂ 1 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಗೋಪಿಕೃಷ್ಣ ಬಂಧಿತ ಆರೋಪಿ.

ನಗರದ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಚಲಿಸುವ ರೈಲಿನಲ್ಲೇ 2022ರ ಮಾರ್ಚ್‌ನಲ್ಲಿ ಬೀದರ್ ಜಿಲ್ಲೆಯ ಹುಮನಾಬಾದ್ ನಿವಾಸಿ ಸಂದೀಪ್ ಅವರಿಗೆ ಸೇರಿದ ಬಂಗಾರದ ಒಡವೆ, ಮೊಬೈಲ್‌ ಹಾಗೂ ₹5,000 ನಗದು ಇದ್ದ ಬ್ಯಾಗ್‌ ಕಳವು ಮಾಡಲಾಗಿತ್ತು. ಈ ಬಗ್ಗೆ ಸಂದೀಪ್ ಪ್ರಕರಣ ದಾಖಲಿಸಿದ್ದರು.

ADVERTISEMENT

ಸಿಬ್ಬಂದಿಯನ್ನು ಕಂಡು ಓಡಿಹೋಗಲು ಯತ್ನಿಸಿದ್ದ ಆರೋಪಿಯನ್ನು ಹಿಡಿದು ವಿಚಾರಿಸಿದಾಗ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಅಣ್ಣಯ್ಯ ಕೆ.ಟಿ., ಎಎಸ್‌ಐ ನಾಗರಾಜ್ ಹಾಗೂ ಸಿಬ್ಬಂದಿಯಾದ ಶ್ರೀನಿವಾಸ್, ಹರೀಶ್ ನಾಯ್ಕ, ಹಾಲೇಶ್, ಚೇತನ್, ಸುನೀಲ್, ತಿಪ್ಪೇಶ್, ಹನುಮಂತಪ್ಪ ಭಜಂತ್ರಿ, ರಾಜು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.