ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪತಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪ್ರತಿನಿಧಿಸುವ ದಾವಣಗೆರೆ ಉತ್ತರ ಕ್ಷೇತ್ರಕ್ಕಿಂತ ಮಾವ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುವ ದಕ್ಷಿಣ ಕ್ಷೇತ್ರದಲ್ಲೇ ಹೆಚ್ಚಿನ ಮತಗಳು ‘ಕೈ’ಹಿಡಿದಿವೆ.
ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 72,076 ಮತಗಳು ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಈ ಕ್ಷೇತ್ರದಲ್ಲಿ 97,064 ಮತಗಳು ಲಭಿಸಿವೆ. ಕಾಂಗ್ರೆಸ್‌ಗಿಂತ ಬಿಜೆಪಿಗೆ 24,988 ಮತಗಳು ಹೆಚ್ಚಾಗಿ ಚಲಾವಣೆಯಾಗಿವೆ.
ಪ್ರಭಾ ಮಲ್ಲಿಕಾರ್ಜುನ್ ಅವರ ಮಾವ ಶಾಮನೂರು ಶಿವಶಂಕರಪ್ಪ ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 84,621 ಮತಗಳು ಬಿದ್ದಿದ್ದು, ಬಿಜೆಪಿಗೆ 62,777 ಮತಗಳು ಚಲಾವಣೆಯಾಗಿದ್ದು, ಇಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ 21,844 ಮತಗಳು ಲಭಿಸಿವೆ.
ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 82,266 ಮತಗಳು ಹಾಗೂ ಬಿಜೆಪಿಗೆ 72,169 ಮತಗಳು ಚಲಾವಣೆಯಾಗಿದ್ದು, 10,097 ಮತಗಳಲ್ಲಿ ಕಾಂಗ್ರೆಸ್ ಮುಂದೆ ಇದ್ದರೆ, ಬಿಜೆಪಿಯ ಏಕೈಕ ಶಾಸಕ ಬಿ.ಪಿ.ಹರೀಶ್ ಅವರು ಪ್ರತಿನಿಧಿಸುವ ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ 4,639 ಹೆಚ್ಚಿನ ಮತಗಳು ಬಿದ್ದಿವೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ 80,937 ಮತಗಳು ಬಿದ್ದಿವೆ.
ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 77,406 ಮತಗಳು ಲಭಿಸಿದ್ದರೆ, ಗಾಯತ್ರಿ ಸಿದ್ದೇಶ್ವರ ಅವರ ಪರ 81,501 ಮತಗಳು ಚಲಾವಣೆಯಾಗಿವೆ. ಮಾಯಕೊಂಡ ಕ್ಷೇತ್ರದಲ್ಲಿ 78,541 ಮತಗಳು ಕಾಂಗ್ರೆಸ್‌ಗೆ ಬಿದ್ದಿದ್ದರೆ, ಬಿಜೆಪಿಗೆ 72,265 ಮತಗಳು ಬಿಜೆಪಿಗೆ ಲಭಿಸಿವೆ. ಹೊನ್ನಾಳಿಯಲ್ಲಿ ಕಾಂಗ್ರೆಸ್‌ಗೆ 79,477 ಮತಗಳು ಚಲಾವಣೆಯಾಗಿದ್ದು, ಬಿಜೆಪಿಗೆ 72,293 ಮತಗಳು ಲಭಿಸಿವೆ.
ಕಾಂಗ್ರೆಸ್‌ಗೆ ಯಾವ ಸುತ್ತಿನಲ್ಲಿ ಎಷ್ಟು ಮುನ್ನಡೆ
ಸುತ್ತು;ಮುನ್ನಡೆ
1;2,745
2;1,477
3;4,387
4;2,965
5;15,693
6;24,709
7;28,467
8;45,152
9;46;971
10;45,152
11;42,216
12;42,156
13;38,772
14;37,210
15;40,950
16;34,906
17;29,240
18;27,636
19;26,094
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.