ಹರಪನಹಳ್ಳಿ: ಪರಿಶಿಷ್ಟ ಜಾತಿಯಲ್ಲಿರುವ ಕೊರಮ, ಕೊರಚ, ಲಂಬಾಣಿ ಮತ್ತು ಭೋವಿ ಜನಾಂಗಗಳನ್ನು ಎಸ್ಸಿ ಮೀಸಲಾತಿ ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿ ಇಲ್ಲಿಯ ಗೋರ್‍ಸಿಕ್‍ವಾಡಿ, ಗೋರ್ ಸೇನಾ ಕಾರ್ಯಕರ್ತರು ಪತ್ರ ಚಳವಳಿ ನಡೆಸಿದರು.
ಮಂಗಳವಾರ ಪಟ್ಟಣದ ಹೊಸಪೇಟೆ ರಸ್ತೆ, ಬೈಪಾಸ್ ರಸ್ತೆ, ಮೇಗಳಪೇಟೆ ರಸ್ತೆಗಳಲ್ಲಿರುವ ಅಂಚೆ ಕಚೇರಿಗಳಿಗೆ ಬಂದ ಕಾರ್ಯಕರ್ತರು ಪತ್ರದ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ನಾಲ್ಕು ಸಮುದಾಯಗಳನ್ನು ಕೈ ಬಿಡಲಾಗಿದೆ ಎಂದು ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮೀಸಲಾತಿ ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಚಂದ್ರನಾಯ್ಕ, ವಿಶ್ವನಾಥ, ರಮೇಶನಾಯ್ಕ, ಈಶ್ವರನಾಯ್ಕ, ಶಿವಾಜಿನಾಯ್ಕ, ಹನುಮಂತನಾಯ್ಕ, ರಾಜೀವ್ ಡಿ.ನಾಯ್ಕ, ಡೀಕ್ಯಾನಾಯ್ಕ, ಪ್ರಕಾಶನಾಯ್ಕ, ಹನುಮಂತನಾಯ್ಕ, ಗುರುಸಿದ್ದಪ್ಪ, ಸಂತೋಷನಾಯ್ಕ, ವಿಘ್ನೇಶ್ , ಸೂರ್ಯನಾಯ್ಕ ಅವರೂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.