ದಾವಣಗೆರೆ: ಇಲ್ಲಿನ ಲಿಟರರಿ ಫೋರಂನಿಂದ ರಾಷ್ಟೀಯ ಅಕ್ಷರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ಪಲ್ಲವಿ ಯಡೆಯೂರು ಅವರ ಕಥೆ ‘ಕಣಗಿಲೆ’, ಎಸ್.ನಟರಾಜ ಅವರ ‘ಮಗಳು’, ತಿರುಪತಿ ಬಂಗಿ ಅವರ ‘ನಾಯಿಯ ಹೆಜ್ಜೆ’ ಕಥೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ತಲಾ ₹ 5,000 ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು. ಫೆಬ್ರುವರಿ 7ರಿಂದ ನಗರದಲ್ಲಿ ನಡೆಯಲಿರುವ ‘ರಾಷ್ಟ್ರೀಯ ಅಕ್ಷರ ಹಬ್ಬ’ದಲ್ಲಿ ಬಹುಮಾನ ವಿತರಿಸಲಾಗುವುದು. ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದು, ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಸ್ಮಿತಾ ಅಮೃತರಾಜ ಅವರ ‘ಕಮಲಿ’, ಮಹಿಳಾ ಕೇಂದ್ರಿತ ವಿಶೇಷ ಕಥಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಥೆಗಾರ ಹಾಗೂ ವಿಮರ್ಶಕ ಕಂನಾಡಿಗ ನಾರಾಯಣ ಹಾಗೂ ಕಥೆಗಾರ ಹನಮಂತ ಹಾಲಿಗೆರೆ ತೀರ್ಪುಗಾರರಾಗಿದ್ದರು.
ಹೊರನಾಡ ಕನ್ನಡಿಗರವೂ ಸೇರಿದಂತೆ 120ಕ್ಕೂ ಹೆಚ್ಚು ಕಥೆಗಳು ಸ್ಪರ್ಧೆಗೆ ಬಂದಿದ್ದವು. ಅತ್ಯುತ್ತಮ 19 ಕಥೆಗಳಿಗೆ ಸ್ಮರಣಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೆಚ್ಚುಗೆ ಪಡೆದ ಪ್ರಮುಖ ಕಥೆಗಳು:
‘ಹರಿಯಲಾರದವಳು’ (ಉಷಾ ನರಸಿಂಹನ್), ‘ಎರಡು ಮೋತಿಯ ಪೆನ್ನು’ (ಕಳಕೇಶ ಗೊರವರ), ‘ನೀವು ಕಾಣಿರೆ’ (ನಂದಿನಿ ಹೆದ್ದುರ್ಗ), ‘ಸಂಗ್ರಾಮ’ (ಪ್ರೇಮಲತಾ ಬಿ.), ‘ನಿಯೋಗ’ (ರವಿಕುಮಾರ್ ಕುಮಾರಪುರ), ‘ದಡವನರಸಿದ ನದಿ’ (ಪಾಪು ಗುರು), ‘ಬೆಳಕು ಕುಡಿದ ಸಂಜೆ’ (ಸದಾಶಿವ ಸೊರಟೂರು), ‘ಬಳಪದ ಕಲ್ಲು’ (ನಾಗರೇಖಾ ಗಾಂವ್ಕರ್), ‘ಶ್ರೀರಮಣ ನಿರ್ಯಾಣ’ (ಅಜಿತ ಹರೀಶಿ), ‘ಸ್ವಾಭಿಮಾನ ಸಮುದ್ರ’ (ಮೊದೂರು ತೇಜ), ‘ಗೋಧೂಳಿಯೂ ಮತ್ತೂ ಸಾಬಿಯೂ’ (ಗೌರಿ ಚಂದ್ರಕೇಸರಿ), ‘ಅಲೈ ಹಬ್ಬ’ (ಶಿವಪ್ಪ ಬಡಿಗೇರ), ‘ತುಪ್ಪದ ಗಿಂಡಿ’ (ಸನಾವುಲ್ಲಾ ನವಿಲೇಹಾಳ್), ‘ಇಣುಕು’ (ಪೂರ್ಣಿಮಾ ಮಾಳಗಿಮನಿ), ‘ಶಕುನದ ಚುಕ್ಕಿ’ (ನಾಗರಾಜ ಕೋರಿ), ‘ಹಂಗು’ (ಭದ್ರಪ್ಪ ಹೆನ್ಲಿ), ‘ಅಕ್ಕನ ಗಂಟು’ (ಪ್ರಕಾಶ ಖಾಡೆ), ಗಾಳಕ್ಕೆ ಸಿಕ್ಕ ಮೀನು (ಇಸ್ಮಾಯಿಲ್ ತಳಕಲ್), ‘ಯಡಾಂಬ ನಾಗರಾಜರು ಮತ್ತು..’ (ಗೋವಿಂದರಾಜ ಕಲ್ಲೂರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.