
ದಾವಣಗೆರೆಯಲ್ಲಿ ಚಂದ್ರಗ್ರಹಣದ ಹಿನ್ನಲೆಯಲ್ಲಿ ದುರ್ಗಾಂಬಿಕ ದೇವಿ ದೇವಸ್ಥಾನವನ್ನು ಮಂಗಳವಾರ ಮಧ್ಯಾಹ್ನ ಬಂದ್ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆ: ಕೇತುಗ್ರಸ್ತ ಚಂದ್ರಗ್ರಹಣದ ಅಂಗವಾಗಿ ಜಿಲ್ಲೆಯ ಬಹುತೇಕ ದೇಗುಲಗಳು ಮಂಗಳವಾರ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದವು. ಸಂಜೆಯ ಬಳಿಕ ಬಾಗಿಲು ತೆರೆದು ಗ್ರಹಣ ದೋಷ ನಿವಾರಣೆಯ ಪೂಜಾ ಕೈಂಕರ್ಯಗಳು ಜರುಗಿದವು.
ನಗರದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ, ಲಿಂಗೇಶ್ವರ ದೇಗುಲ, ಬಕ್ಕೇಶ್ವರ ದೇವಸ್ಥಾನ, ಕೂಡಲಿ ಶಂಕರಮಠ, ಕಾಳಿಕಾದೇವಿ ದೇಗುಲ, ಕೆ.ಬಿ. ಬಡಾವಣೆಯ ರಾಘವೇಂದ್ರಸ್ವಾಮಿ ದೇಗುಲ, ವೀರಭದ್ರೇಶ್ವರ ದೇವಸ್ಥಾನ, ಶಿವಾಜಿ ಪ್ರತಿಮೆ ಸಮೀಪದ ಆಂಜನೇಯಸ್ವಾಮಿ ದೇಗುಲ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಬಾಗಿಲು ಮುಚ್ಚಿದ್ದವು.
ಗ್ರಹಣದ ಅವಧಿಯಲ್ಲಿ ಹಲವರು ಮನೆಯಿಂದ ಹೊರಗೆ ಬರಲಿಲ್ಲ. ಇದರಿಂದ ದೇಗಲುಗಳು ಬಿಕೊ ಎನ್ನುತ್ತಿದ್ದವು.
ಮಧ್ಯಾಹ್ನ 3.20ರಿಂದ ಚಂದ್ರಗ್ರಹಣ ಆರಂಭವಾಗಿತ್ತು. ಸಂಜೆ 6.20ರಿಂದ 6.40ರವರೆಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶವಿತ್ತು. ಗ್ರಹಣ ದರ್ಶನಕ್ಕೆ ಕಡಿಮೆ ಅವಧಿ ಇದ್ದ ಕಾರಣ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಿದಂತೆ ಕಾಣಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.