ADVERTISEMENT

ದಾವಣಗೆರೆ: ವಾಹನಗಳ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:19 IST
Last Updated 22 ಜನವರಿ 2026, 2:19 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ದಾವಣಗೆರೆ: ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ, ಕಾರು ಹಾಗೂ ಇನ್ನಿತರ ವಾಹನಗಳ ಮೇಲೆ ವ್ಯಕ್ತಿಯೊಬ್ಬ ಮಂಗಳವಾರ ರಾತ್ರಿ ಕಲ್ಲುಗಳನ್ನು ಎಸೆದು ಜಖಂಗೊಳಿಸಿದ್ದಾನೆ. 

ಕೃತ್ಯ ಎಸಗಿದ ಆರೋಪದಡಿ ಭರತ್ ಕಾಲೊನಿಯ ಡೇವಿಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ADVERTISEMENT

‘ಮನೆಗಳ ಮುಂಭಾಗ ಹಾಗೂ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ರಾತ್ರಿ ಏಕಾಏಕಿ ಜೋರಾಗಿ ಕೂಗುತ್ತಾ, ಕಿರುಚಾಡುತ್ತಾ ಕಲ್ಲುಗಳನ್ನು ಎಸೆದಿದ್ದಾನೆ. 4 ಕಾರು ಸೇರಿದಂತೆ 6 ವಾಹನಗಳು ಜಖಂಗೊಂಡಿವೆ. ಸಹೋದರನ ಜೊತೆಗೆ ನಡೆದ ಗಲಾಟೆಯ ಬಳಿಕ ಆರೋಪಿಯು ಸಿಟ್ಟು, ಹತಾಶೆಯಿಂದ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.  

ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾವಣಗೆರೆ: ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದ ಕೆಎಸ್ಸಾರ್ಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಬಾತಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಕೆಎಸ್ಸಾರ್ಟಿಸಿ ಬಸ್ಸು ಚಾಲಕ ಮಹಮ್ಮದ್ ರಫೀಕ್‌ ಚಾಕುವಿನಿಂದ ಹಲ್ಲೆಗೊಳಗಾದ ವ್ಯಕ್ತಿ. ಕಳೆದ ರಾತ್ರಿ ಬಾತಿ ಬಳಿ ಬರುತ್ತಿದ್ದಾಗ ಮಹಮ್ಮದ್ ರಫೀಕ್ ಚಾಲನೆ ಮಾಡುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಅಡ್ಡಲಾಗಿ ಲಾರಿ ನಿಲ್ಲಿಸಲಾಗಿತ್ತು.  

ಬಸ್ಸಿಗೆ ಅಡ್ಡಲಾಗಿ ಲಾರಿ ನಿಲ್ಲಿಸಿದ್ದನ್ನು ತೆಗೆಯುವಂತೆ ಬಸ್ಸು ಚಾಲಕ ರಫೀಕ್ ಹಾರ್ನ್ ಮಾಡಿ, ಕೂಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಲಾರಿ ಚಾಲಕ ಜಗದೀಶ ಎಂಬಾತ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡಿದ ಲಾರಿ ಚಾಲಕ ಜಗದೀಶನನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಘಟನೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಬಸ್ಸಿನಲ್ಲೇ ಪ್ರಯಾಣಿಕರು ಕಾಲ ಕಳೆಯಬೇಕಾಯಿತು. ಗಲಾಟೆಯ ದೃಶ್ಯಗಳನ್ನು ಸ್ಥಳೀಯರು, ಬಸ್ಸು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಲಾರಿ ಚಾಲಕನ ವಿರುದ್ಧ ಗ್ರಾಮಸ್ಥರೂ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.