ADVERTISEMENT

ದಾವಣಗೆರೆ | ನಗರದಲ್ಲಿ ಕೆ–ಸೆಟ್‌ ಸುಗಮ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 8:05 IST
Last Updated 3 ನವೆಂಬರ್ 2025, 8:05 IST
ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ಕೆ-ಸೆಟ್ ಬರೆದು ಹೊರಬಂದ ಅಭ್ಯರ್ಥಿಗಳು ಚರ್ಚೆಯಲ್ಲಿ ತೊಡಗಿದ್ದರು
ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ಕೆ-ಸೆಟ್ ಬರೆದು ಹೊರಬಂದ ಅಭ್ಯರ್ಥಿಗಳು ಚರ್ಚೆಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ನಗರದ 21 ಕೇಂದ್ರಗಳಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್‌) ಭಾನುವಾರ ಸುಗಮವಾಗಿ ನಡೆಯಿತು. 

ಒಟ್ಟು 9,610 ಪರೀಕ್ಷಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,829 ಅಭ್ಯರ್ಥಿಗಳು ಹಾಜರಾದರು. 782 ಜನ ಗೈರಾಗಿದ್ದರು. 

ಬೆಳಿಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರಗಳ ಆವರಣಕ್ಕೆ ಬಂದಿದ್ದ ಪರೀಕ್ಷಾರ್ಥಿಗಳನ್ನು ಫೇಸ್‌ ರೆಕಗ್ನೇಷನ್‌ ತಪಾಸಣೆ ನಡೆಸಲಾಯಿತು. ನಂತರ 9.30ಕ್ಕೆ ಪರೀಕ್ಷಾ ಕೊಠಡಿಗಳಿಗೆ ಬಿಡಲಾಯಿತು. 10ರಿಂದ ಮಧ್ಯಾಹ್ನ 1ರ ವರೆಗೆ ಪರೀಕ್ಷೆ ನಡೆಯಿತು. ಎಲ್ಲಾ ಕೇಂದ್ರಗಳಲ್ಲಿಯೂ ಪರೀಕ್ಷೆ ಸುಗಮವಾಗಿ ನಡೆದಿದ್ದು, ಯಾವುದೇ ಗೊಂದಲ ತಲೆದೋರಲಿಲ್ಲ ಎಂದು ಡಿಡಿಪಿಯು ಪಳನಿವೇಲು ಡಿ. ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT