ADVERTISEMENT

ಕಡರನಾಯ್ಕನಹಳ್ಳಿ: ‘ಮಾದಕ ವ್ಯಸನದಿಂದ ಚಿತ್ತ ಸ್ವಾಸ್ಥ್ಯ ಹಾಳು’

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:07 IST
Last Updated 21 ಮೇ 2025, 13:07 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಶಾರಾದೇಶಾನಂದ ಗುರೂಜಿ ಅವರನ್ನು ಗೌರವಿಸಲಾಯಿತು
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಶಾರಾದೇಶಾನಂದ ಗುರೂಜಿ ಅವರನ್ನು ಗೌರವಿಸಲಾಯಿತು   

ಕಡರನಾಯ್ಕನಹಳ್ಳಿ: ಮಾದಕ ವ್ಯಸನದಿಂದ ಚಿತ್ತ ಸ್ವಾಸ್ಥ್ಯ ಹಾಳಾಗುತ್ತದೆ. ಅದರಿಂದ ಮುಕ್ತರಾದರೆ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ ಎಂದು ರಾಮಕೃಷ್ಣಾಶ್ರಮದ ಶಾರಾದೇಶಾನಂದ ಗುರೂಜಿ ತಿಳಿಸಿದರು.

ಸಮೀಪದ ಉಕ್ಕಡಗಾತ್ರಿಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

‘ತಂದೆ–ತಾಯಿ, ಪತ್ನಿ, ಬಂಧುಗಳು ನೀವು ಈ ಶಿಬಿರದಿಂದ ಪಾನ ಮುಕ್ತರಾಗಲಿ ಎಂಬ ಮಹಾದಾಸೆ ಹೊಂದಿದ್ದಾರೆ. ನಿಮಗಾಗಿ ಆರತಿ ಹಿಡಿದು ಮನೆಯಲ್ಲಿ ಕಾಯುತ್ತಿದ್ದಾರೆ. ಅವರಿಗಾಗಿ, ನಿಮಗಾಗಿ ಬದಲಾಗಿದ್ದೀರಿ. ಉಜ್ವಲ ಭವಿಷ್ಯ ನಿಮಗಾಗಿ ಕಾಯುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್, ಪತ್ರಕರ್ತ ಜಿಗಳಿ ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಗೌಡ ಜಿಗಳೇರ, ಮಲೇಬೆನ್ನೂರು ಪುರಸಭೆಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೆ.ಪಿ. ಗಂಗಾಧರ, ಶಿಬಿರಾಧಿಕಾರಿ ನಂದಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.