ADVERTISEMENT

ದಾವಣಗೆರೆ | ವೃದ್ಧೆ ಸಾವು: ಮೃತರ ಸಂಖ್ಯೆ 6ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:43 IST
Last Updated 4 ಜೂನ್ 2020, 16:43 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಇಬ್ಬರು ಕಣ್ಣಿನ ವೈದ್ಯರು, ಒಂದು ವರ್ಷದ ಬಾಲಕ, ಐದು ವರ್ಷದ ಬಾಲಕಿ ಸೇರಿ 13 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. 83 ವರ್ಷದ ವೃದ್ಧೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ.

ಪಿ.ಜೆ. ಬಡಾವಣೆಯ 37 ವರ್ಷದ ವೈದ್ಯ (ಪಿ.4094) ಮತ್ತು 35 ವರ್ಷದ ವೈದ್ಯೆ (ಪಿ.4095) ಸೋಂಕಿಗೆ ಒಳಗಾದವರು. ಅವರು ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದಾರೆ.

ಬಸವರಾಜ ಪೇಟೆಯ 83 ವರ್ಷದ ವೃದ್ಧೆ (ಪಿ.4093) ಅವರನ್ನು ಮೇ 31ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ರಾತ್ರಿ ಅವರು ಮೃತಪಟ್ಟಿದ್ದರು. ಪಿ. 68 ವರ್ಷದ ಮಹಿಳೆಯಿಂದ (ಪಿ.2560) ಸೋಂಕು ತಗುಲಿದೆ ಎಂದು ಗುರುತಿಸಲಾಗಿದೆ.

ADVERTISEMENT

ಈ ಮೂವರನ್ನು ಹೊರತುಪಡಿಸಿದರೆ ಉಳಿದ ಎಲ್ಲ 10 ಮಂದಿ ಜಾಲಿನಗರದವರಾಗಿದ್ದಾರೆ.

ಜಾಲಿನಗರದ 45 ವರ್ಷದ ಮಹಿಳೆಯಿಂದ(ಪಿ.2819) ಐವರು ಸೋಂಕಿಗೆ ಒಳಗಾಗಿದ್ದಾರೆ. 55 ವರ್ಷದ ಮಹಿಳೆ (ಪಿ.4083), 22 ಮತ್ತು 21 ವರ್ಷದ ಯುವತಿಯರು (ಪಿ.4084 ,ಪಿ.4090), 45 ವರ್ಷದ ಮಹಿಳೆ(ಪಿ.4091), 55 ವರ್ಷದ ಪುರುಷ (ಪಿ.4092) ಸೋಂಕಿಗೆ ಒಳಗಾದವರು.

ಜಾಲಿನಗರದ 46 ವರ್ಷದ ವ್ಯಕ್ತಿಯಿಂದ (ಪಿ.2415) ಉಳಿದ ಐವರಿಗೆ ಸೋಂಕು ಬಂದಿದೆ. 36 ವರ್ಷದ ಪುರುಷ (ಪಿ.4085), 26 ವರ್ಷದ ಮಹಿಳೆ(ಪಿ.4086), 5 ವರ್ಷದ ಬಾಲಕಿ(ಪಿ.4087), ಒಂದು ವರ್ಷದ ಬಾಲಕ(ಪಿ.4088), 35 ವರ್ಷದ ಮಹಿಳೆ(ಪಿ.4089) ಸೋಂಕಿಗೆ ಒಳಗಾದವರು.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 179ಕ್ಕೆ ಏರಿದೆ. ಅದರಲ್ಲಿ ಐವರು ಮೃತಪಟ್ಟಿದ್ದಾರೆ. 141 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 33 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.