ADVERTISEMENT

ವೆಂಕಟೇಶ್ವರ ಟ್ರಸ್ಟ್‌ನಿಂದ ನಿತ್ಯ 300 ಜನರಿಗೆ ಆಹಾರ ಪೊಟ್ಟಣ

​ಪ್ರಜಾವಾಣಿ ವಾರ್ತೆ
Published 1 ಮೇ 2021, 5:26 IST
Last Updated 1 ಮೇ 2021, 5:26 IST
ದಾವಣಗೆರೆಯ ಲಕ್ಷ್ಮಿವೆಂಕಟೇಶ್ವರ ಟೆಂಪಲ್ ಟ್ರಸ್ಟ್‌ನಿಂದ ಕೂಲಿ ಕಾರ್ಮಿಕ ಮಹಿಳೆಗೆ ಆಹಾರ ಪೊಟ್ಟಣ ವಿತರಿಸಲಾಯಿತು.
ದಾವಣಗೆರೆಯ ಲಕ್ಷ್ಮಿವೆಂಕಟೇಶ್ವರ ಟೆಂಪಲ್ ಟ್ರಸ್ಟ್‌ನಿಂದ ಕೂಲಿ ಕಾರ್ಮಿಕ ಮಹಿಳೆಗೆ ಆಹಾರ ಪೊಟ್ಟಣ ವಿತರಿಸಲಾಯಿತು.   

ದಾವಣಗೆರೆ: ಲಾಕ್‌ಡೌನ್‌ನಿಂದಾಗಿ‌ ಹಸಿವಿನಿಂದ ಬಳಲುವ ನಿರ್ಗತಿಕರಿಗೆ ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಶ್ರೀ ಲಕ್ಷ್ಮಿವೆಂಕಟೇಶ್ವರ ಟೆಂಪಲ್ ಟ್ರಸ್ಟ್‌ನಿಂದ ಆಹಾರ ಪೊಟ್ಟಣ ನೀಡಲಾಗುತ್ತಿದೆ.

ಕಳೆದ ವರ್ಷ ಲಾಕ್‌ಡೌನ್ ವೇಳೆ ಸತತ ಒಂದೂವರೆ ತಿಂಗಳು ಆಹಾರವನ್ನು ನೀಡಿದ್ದ ಟ್ರಸ್ಟ್‌, ಈ ಬಾರಿ ಲಾಕ್‌ಡೌನ್ ಮುಗಿಯುವವರೆಗೂ ನಿತ್ಯ 300 ಆಹಾರ ಪೊಟ್ಟಣಗಳನ್ನು ಸ್ವಂತ ವಾಹನದಲ್ಲೇ ತೆಗೆದುಕೊಂಡು ಹೋಗಿ, ಕಲ್ಲು ಒಡೆಯುವವರು, ಕಟ್ಟಡ ಕಾರ್ಮಿಕರು, ತಳ್ಳುವ ಗಾಡಿಯ ವ್ಯಾಪಾರಿಗಳು ಹಾಗೂ ಅಲೆಮಾರಿಗಳಿಗೆ ನೀಡುತ್ತಿದೆ.

ದೇವಾಲಯದಲ್ಲಿ ಮೂವರು ಅಡುಗೆ ಭಟ್ಟರಿದ್ದು, ನಿತ್ಯವೂ ಆಹಾರ ತಯಾರಿಸುತ್ತಾರೆ. ಸ್ವಯಂ ಸೇವಕ ಕೆ.ಟಿ.ಗೋಪಾಲಗೌಡ ಅವರ ತಂಡ ಆಹಾರವನ್ನು ಪ್ಯಾಕ್‌ ಮಾಡುತ್ತದೆ. ದಿನಾಲೂ ಒಂದೊಂದು ಬಗೆಯ ತಿಂಡಿಗಳನ್ನು
ನೀಡಲಾಗುತ್ತಿದೆ.

ADVERTISEMENT

‘ಲಾಕ್‌ಡೌನ್ ವೇಳೆ ಎಷ್ಟೋ ಜನರಿಗೆ ಊಟ ಸಿಗುವುದಿಲ್ಲ. ಇದನ್ನು ಮನಗಂಡು ದೇವಸ್ಥಾನದಿಂದ ಅಳಿಲು ಸೇವೆ ಮಾಡಲಾಗುತ್ತಿದೆ’ ಎಂದು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಎನ್‌. ರಾಮಮೋಹನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.