ದಾವಣಗೆರೆ: ‘ಇಷ್ಟೆಲ್ಲ ಸಾಮ್ರಾಜ್ಯ ಕಟ್ಟಿದ್ದೇವೆ. ಅದನ್ನು ಮುಂದಕ್ಕೆ ಒಯ್ಯಲು ಮಕ್ಕಳು ಬೇಕೇಬೇಕಲ್ಲ. ಅವರು ರಾಜಕೀಯ ಬಂದೇ ಬರ್ತಾರೆ. ಈ ಬಗ್ಗೆ ಈಗಾಗಲೇ ನಾನು ಘೋಷಣೆ ಮಾಡಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜಾರಕಿಹೊಳಿ ಅವರ ಪುತ್ರ ಮತ್ತು ಪುತ್ರಿ ಓಡಾಡಿಕೊಂಡಿರುವ ಬಗ್ಗೆ ಸುದ್ದಿಗಾರರು ಹರಿಹರದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಈಗಲೇ ಚುನಾವಣೆಗೆ ನಿಲ್ಲಲ್ಲ. ಅವರು ಇನ್ನಷ್ಟು ಕಲಿಯಲಿಕ್ಕಿದೆ. ಮುಂದೆ ಎಲ್ಲ ಕಲಿತುಕೊಂಡು ರಾಜಕೀಯಕ್ಕೆ ಬರುತ್ತಾರೆ ಎಂದು ಸಮರ್ಥಿಸಿಕೊಂಡರು.
ಮಗಳು ಪ್ರಿಯಾಂಕ ಸೋಮವಾರ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.